ಗೋವಾ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಪಿ. ಚಿದಂಬರಂ ಭವಿಷ್ಯ

Prasthutha|

ನವದೆಹಲಿ: ಮುಂದಿನ ವರ್ಷ ನಡೆಯುವ ಗೋವಾ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

ಎಐಸಿಸಿ ಗೋವಾ ಚುನಾವಣಾ ಉಸ್ತುವಾರಿಯಾಗಿರುವ ಚಿದಂಬರಂ ಅವರು ಪಣಜಿಯಲ್ಲಿ ಅಸೆಂಬ್ಲಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಗೋವಾದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿದ ರಾಜನೀತಿಜ್ಞ ಮತ್ತು ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಇಲ್ಲಿನ ಇತಿಹಾಸವನ್ನು ಬದಲಿಸುತ್ತೇವೆ ಎಂದು ತಿಳಿಸಿದರು.

- Advertisement -

ರಾಜ್ಯದಲ್ಲಿ ಪಕ್ಷವು ಮಹಿಳೆಯರು, ಪರಿಶಿಷ್ಟ ಪಂಗಡಗಳು, ಮೀನುಗಾರ ಸಮುದಾಯ ಮತ್ತು ದಲಿತ ಮತ್ತು ಯುವ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಿದೆ ಎಂದು ಚಿದಂಬರಂ ತಿಳಿಸಿದರು.



Join Whatsapp