ಕೊಟ್ಟ ಭರವಸೆಯಂತೆ ನೀವು ನಡೆದುಕೊಂಡಿಲ್ಲ: ಸ್ಪೀಕರ್ ವಿರುದ್ಧ ಕಾಂಗ್ರೆಸ್ ನಾಯಕರ ಅಸಮಾಧಾನ

Prasthutha|

ಬೆಂಗಳೂರು: ಕಳೆದ ಬಾರಿ ಸದನ ಸಮಿತಿ ಸಭೆಯಲ್ಲಿ ಕೊಟ್ಟ ಭರವಸೆಯಂತೆ ನೀವು ನಡೆದುಕೊಂಡಿಲ್ಲ ಎಂದು ಸದನ ಸಲಹಾ ಸಮಿತಿ ಸಭೆಯಲ್ಲಿ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಸದಸ್ಯರು ಅಸಮಾಧಾನ ಹೊರಹಾಕಿದ ಘಟನೆ ಮಂಗಳವಾರ ನಡೆಯಿತು.


ಏಕಾಏಕಿ ವಿಧೇಯಕ ಮಂಡನೆಗೆ ಅವಕಾಶ ಕೊಟ್ಟಿದ್ದನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಬಾರಿ ನಮ್ಮ ಹೋರಾಟ ಮುಂದುವರಿಯಲಿದೆ ಎನ್ನುವ ಸಂದೇಶ ನೀಡಿದರು.

- Advertisement -


ಇದಕ್ಕೂ ಮೊದಲು ಕಾಂಗ್ರೆಸ್ ನಾಯಕರ ಸಹಕಾರ ಕೋರಿದ ಆಡಳಿತ ಪಕ್ಷದ ನಾಯಕರು, ಎಲ್ಲಾ ರೀತಿಯ ಚರ್ಚೆಗೆ ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜ್ವಲಂತ ಸಮಸ್ಯೆಗಳು ಮತ್ತು ಜನಪರ ವಿಧೇಯಕಗಳ ಚರ್ಚೆಗೆ ಮಾತ್ರ ಸಹಕಾರ ನೀಡುವುದಾಗಿ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಿದರು.

- Advertisement -