2002ರ ಬಿಜೆಪಿಯ ಪಾಠದಿಂದ ಗುಜರಾತಿನಲ್ಲಿ ಶಾಶ್ವತ ಶಾಂತಿ ಸ್ಥಾಪನೆ: ಅಮಿತ್ ಶಾ

Prasthutha|

ಅಹಮದಾಬಾದ್: 2002ರ ಬಿಜೆಪಿಯ ಪಾಠದಿಂದ ಗುಜರಾತಿನಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಗಿದೆ ಎಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

- Advertisement -

ಕಾಂಗ್ರೆಸ್ ಬೆಂಬಲದಿಂದ ಸಮಾಜ ಘಾತುಕ ಶಕ್ತಿಗಳು ಗುಜರಾತಿನಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದರು. ಆದರೆ 2002 ರಲ್ಲಿ ಬಿಜೆಪಿಯು ದುಷ್ಕರ್ಮಿಗಳಿಗೆ ಪಾಠ ಕಲಿಸಿದ ನಂತರ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆಯಾಯಿತು ಎಂದು ಅವರು ಹೇಳಿದರು.

ಖೇಡಾ ಜಿಲ್ಲೆಯ ಮಹುಧಾ ಪಟ್ಟಣದಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಗುಜರಾತಿನಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ (1995ಕ್ಕೂ ಮೊದಲು) ಕೋಮುಗಲಭೆಗಳು ವ್ಯಾಪಕವಾಗಿದ್ದವು. ಕಾಂಗ್ರೆಸ್ ವಿವಿಧ ಸಮುದಾಯಗಳು ಮತ್ತು ಜಾತಿಗಳ ನಡುವೆ ಪರಸ್ಪರ ಕಚ್ಚಾಟವನ್ನು ಪ್ರಚೋದಿಸಿ ತನ್ನ ವೋಟ್ ಬ್ಯಾಂಕ್ ಅನ್ನು ಬಲಪಡಿಸಿಕೊಂಡಿದ್ದು ಮಾತ್ರವಲ್ಲದೆ ಸಮಾಜದ ದೊಡ್ಡ ವರ್ಗಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್ನ ಬೆಂಬಲದಿಂದ ದುಷ್ಕರ್ಮಿಗಳು ಗುಜರಾತಿನಲ್ಲಿ ವ್ಯಾಪಕ ಹಿಂಸಾಚಾರದಲ್ಲಿ ತೊಡಗಿದ್ದರು. 2002 ರಲ್ಲಿ ಬಿಜೆಪಿಯು ಅವರಿಗೆ ಪಾಠ ಕಲಿಸಿದ ನಂತರ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆಯಾಯಿತು ಎಂದು ಹೇಳಿದ್ದಾರೆ.

- Advertisement -

ಗುಜರಾತಿನಾದ್ಯಂತ 2002ರ ವೇಳೆ ನರೇಂದ್ರ ಮೋದಿಯ ಅಧಿಕಾರಾವಧಿಯಲ್ಲಿ ಸುಮಾರು 2000 ಮುಸ್ಲಿಮರ ಮಾರಣಹೋಮ ನಡೆದಿತ್ತು.  

Join Whatsapp