ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

Prasthutha|

ನವದೆಹಲಿ : ಮುಂದಿನ ವರ್ಷ ನಡೆಯುವ 5 ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಕೇಂದ್ರ ಮಂಡಳಿ ಬುಧವಾರ ಉಸ್ತುವಾರಿಗಳನ್ನು ನೇಮಕ ಮಾಡಿದೆ.

- Advertisement -

ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ನೇಮಿಸಿದೆ. ಉಳಿದಂತೆ ಸಂಪುಟ ದರ್ಜೆಯ ಸಚಿವರಾದ ಗಜೇಂದ್ರ ಶೇಖಾವತ್ (ಪಂಜಾಬ್), ಪ್ರಹ್ಲಾದ್ ಜೋಶಿ (ಉತ್ತರಾಖಂಡ್), ಭೂಪೇಂದ್ರ ಯಾದವ್ (ಮಣಿಪುರ), ದೇವೆಂದ್ರ ಫಡ್ನವೀಸ್ (ಗೋವ) ಅವರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎಂದು ಬಿಜೆಪಿ ಘೋಷಿಸಿದೆ.

ನೂತನ ಚುನಾವಣಾ ಉಸ್ತುವಾರಿಗಳ ನೇಮಕಾತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅನುಮೋದಿಸಿದ್ದಾರೆ. ಮುಂದಿನ ವರ್ಷ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತು ಗೋವಾದಲ್ಲಿ ಚುನಾವಣೆ ನಡೆಯಲಿದೆ.

- Advertisement -

ಯುಪಿ ಚುನಾವಣಾ ಉಸ್ತುವಾರಿಯಾಗಿ ಆಯ್ಕೆಯಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಸಹಾಯಕರಾಗಿ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ರಾಜ್ಯ ಕೃಷಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಅರ್ಜುನ್ ರಾಮ್ ಮೇಘ್ವಾಲ್, ಅನ್ನಪೂರ್ಣ ದೇವಿ, ರಾಜ್ಯಸಭಾ ಸಂಸದರಾದ ಸರೋಜ್ ಪಾಂಡೆ ಮತ್ತು ವಿವೇಕ್ ಠಾಕೂರ್, ಹರ್ಯಾಣದ ಮಾಜಿ ಸಚಿವ ಕ್ಯಾಪ್ಟನ್ ಅಭಿಮನ್ಯು ಅವರನ್ನು ನೇಮಿಸಲಾಗಿದೆ.

ಬಿಜೆಪಿ ಆರು ಪ್ರದೇಶವಾರು ಉಸ್ತುವಾರಿಗಳಾಗಿ ಲೋಕಸಭಾ ಸಂಸದ ಸಂಜಯ್ ಭಾಟಿಯಾ (ಪಶ್ಚಿಮ ಯುಪಿ), ಬ್ರಿಜ್ ಶಾಸಕರಾದ ಸಂಜೀವ್ ಚೌರಾಸಿಯಾ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವೈ ಸತ್ಯಕುಮಾರ್ ಅಯೋಧ್ಯೆಯ ಉಸ್ತುವಾರಿ, ಹಿರಿಯ ನಾಯಕ ಸುಧೀರ್ ಗುಪ್ತಾ ಕಾನ್ಪುರ ಉಸ್ತುವಾರಿ, ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಗೋರಖಪುರ ಉಸ್ತುವಾರಿ, ಯುಪಿ ಸಹಾಯಕ ಉಸ್ತುವಾರಿ ಸುನಿಲ್ ಓಝ ಕಾಶಿ ಪ್ರದೇಶದ ಉಸುತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ.



Join Whatsapp