ಮಹಿಳೆಯರನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ನೇಮಿಸಿ : ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಸುಪ್ರೀಮ್ ಕೋರ್ಟ್

Prasthutha|

ನವದೆಹಲಿ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಒಕ್ಕೂಟ ಸರ್ಕಾರ ಇಂದು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಖಾಯಂ ಹುದ್ದೆಯನ್ನು ಮಹಿಳೆಯರನ್ನು ಮೀಸಲಿಡುವ ನಿಟ್ಟಿನಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್.ಡಿ.ಎ) ಗೆ ಸೇರಿಸಲಾಗುವುದೆಂದು ಸುಪ್ರೀಮ್ ಕೋರ್ಟ್ ಗೆ ತಿಳಿಸಿದೆ.

- Advertisement -

ಅದಾಗ್ಯೂ ಸರ್ಕಾರ ಮಹಿಳೆಯರಿಗೆ ಎನ್.ಡಿ.ಎ ಕೋರ್ಸ್ ಗಳನ್ನು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರೂಪಿಸಲು ಅಲ್ಪ ಸಮಯ ಬೇಕಾಗಿದೆ ಎಂದು ತಿಳಿಸಿದೆ. ಕೇಂದ್ರದ ಈ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಮ್ ಕೋರ್ಟ್ ಸೆಪ್ಟೆಂಬರ್ 20 ರೊಳಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ಕೇಂದ್ರಕ್ಕೆ ತಿಳಿಸಿದೆ.

ಸಶಸ್ತ್ರ ಪಡೆಗಳಿಗೆ ಭರ್ತಿಗೊಳಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ಎನ್.ಡಿ.ಎ ಗೆ ಸೇರಿಸುವ ನಿರ್ಧಾರವನ್ನು ಸ್ವಾಗತಿಸಿದ ಸುಪ್ರೀಮ್ ಕೋರ್ಟ್ ಈ ಬೆಳವಣಿಗೆಯಿಂದ ನಮಗೆ ತುಂಬಾ ಸಂತೋಷವಾಗುತ್ತಿದೆ. ಸುಧಾರಣೆಗಳು ಕೇವಲ ಒಂದೇ ದಿನಗಳಲ್ಲಿ ಬರಲು ಸಾಧ್ಯವಿಲ್ಲ. ಎನ್.ಡಿ.ಎ ಮತ್ತು ನೌಕಾ ಅಕಾಡೆಮಿಯ ಪರೀಕ್ಷೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ವೇಳಾಪಟ್ಟಿಯನ್ನು ಸಿದ್ದಪಡಿಸಲಿ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

- Advertisement -

ನ್ಯಾಯಾಲಯಗಳು ಮಧ್ಯಸ್ಥಿಕೆ ವಹಿಸುವ ಬದಲು ಲಿಂಗ ಸಮಾನತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸೂಕ್ತ ವಿಧಾನವನ್ನು ಅನುಸರಿಸಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್ ಮತ್ತು ಎಮ್.ಎಮ್ ಸುಂದ್ರೇಶ್ ರವನ್ನೊಳಗೊಂಡ ಪೀಠ ಹೇಳಿದೆ. ನವೆಂಬರ್ 14 ರಂದು ಮರು ನಿಗದಿಗೊಳಿಸಿದ ಎಸ್.ಡಿ.ಎ ಪರೀಕ್ಷೆ ಹಾಜರಾಗಬಹುದೆಂದು ಸುಪ್ರೀಮ್ ಕೋರ್ಟ್ ಇಂದು ತಿಳಿಸಿದೆ.



Join Whatsapp