ಬಿಜೆಪಿಯವರು ಬಿಲ್ಕಿಸ್ ಬಾನು, ಮಣಿಪುರದ ಮಹಿಳೆಯರಿಗೆ ರಾಖಿ ಕಟ್ಟಬೇಕು: ಉದ್ಧವ್ ಠಾಕ್ರೆ

Prasthutha|

ಮುಂಬೈ: ‘ಬಿಜೆಪಿಯವರು ಬಿಲ್ಕಿಸ್ ಬಾನೊ, ಮಣಿಪುರದ ಮಹಿಳೆಯರಿಗೆ ರಾಖಿ ಕಟ್ಟಬೇಕು ಎಂದು ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

- Advertisement -

ಮುಂಬೈನಲ್ಲಿ ನಾಳೆ (ಗುರುವಾರ) ಇಂಡಿಯಾ ಮೈತ್ರಿಕೂಟದ ಎರಡು ದಿನಗಳ ಸಭೆ ನಡೆಯಲಿದ್ದು, ಇದಕ್ಕೂ ಮುನ್ನ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, “ಇಂದು ರಕ್ಷಾ ಬಂಧನ. ಬಿಜೆಪಿಯವರು ಬಿಲ್ಕಿಸ್ ಬಾನೊ, ಮಣಿಪುರದ ಮಹಿಳೆಯರು, ಮಹಿಳಾ ಕುಸ್ತಿಪಟುಗಳಿಗೆ ರಾಖಿ ಕಟ್ಟಬೇಕು. ಅವರು ದೇಶದಲ್ಲಿ ಸುರಕ್ಷಿತವಾಗಿರಬೇಕು, ಅದಕ್ಕಾಗಿ ನಾವು ಒಗ್ಗೂಡಿದ್ದೇವೆ’ ಎಂದು ಹೇಳಿದ್ದಾರೆ.

ನಾಳೆಯಿಂದ ಆರಂಭವಾಗಲಿರುವ ಎರಡು ದಿವಸಗಳ ಸಭೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸೀಟು ಹಂಚಿಕೆ ಕುರಿತು ಸಂವಾದವು ನಡೆಯಬಹುದು ಎಂದು ಅದರ ನಾಯಕರು ಸೂಚಿಸಿದ್ದಾರೆ.

- Advertisement -

28 ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ. ನಾವು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಕುಳಿತು ಚರ್ಚಿಸುತ್ತೇವೆ ಎಂದು ಹಿರಿಯ ನಾಯಕ ಶರದ್ ಪವಾರ್ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಾವು ಇನ್ನೂ ಸೀಟು ಹಂಚಿಕೆಗೆ ಸಂವಾದವನ್ನು ಪ್ರಾರಂಭಿಸಬೇಕಾಗಿದೆ. ನಾವು ಈ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಬಹುದು ಮತ್ತು ನಂತರ ಸೀಟು ಹಂಚಿಕೆ ಕುರಿತು ರಾಜ್ಯ ನಾಯಕರೊಂದಿಗೆ ಮಾತನಾಡಲು ನಾಯಕರಿಗೆ ಜವಾಬ್ದಾರಿಯನ್ನು ನೀಡುವ ಸಾಧ್ಯತೆಯಿದೆ” ಎಂದು ಅವರು ಹೇಳಿದರು.

11 ಸದಸ್ಯರ ಸಮನ್ವಯ ಸಮಿತಿ ಹೆಸರಿಸುವ ನಿರೀಕ್ಷೆಯೂ ಇದೆ, ಮುಂಬೈನಲ್ಲಿ ನಡೆಯುವ ಸಭೆಯಲ್ಲಿ 11 ಮಂದಿ ಯಾರು, ಸಂಚಾಲಕರು ಯಾರು ಎಂಬಿತ್ಯಾದಿ ವಿಚಾರಗಳನ್ನು ನಿರ್ಧರಿಸುತ್ತೇವೆ. ಇವೆಲ್ಲ ಸಣ್ಣ ವಿಷಯಗಳು ಎಂದು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Join Whatsapp