ಅಡುಗೆ ಸಿಲಿಂಡರ್‌ ದರ ಇಳಿಕೆ, ಮೋದಿ ಚುನಾವಣೆ ಗಿಮಿಕ್‌ ಎಂದ ಶೆಟ್ಟರ್‌

Prasthutha|

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಗಿಮಿಕ್ ಇಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ಅಡುಗೆ ಅನಿಲ ಸಿಲಿಂಡರ್ ದರ ಇಳಿಸಿದ್ದಾರೆ ಎಂದು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ತು ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

- Advertisement -

ಗೃಹಲಕ್ಷ್ಮಿ ಯೋಜನೆಗೆ ಶಬರಿ ನಗರದಲ್ಲಿ ಬುಧವಾರ ಸಾಂಕೇತಿಕವಾಗಿ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ಒಳಗೆ ಲೋಕಸಭಾ ಚುನಾವಣೆ ಮಾಡುವ ಸಂಭವವಿದ್ದು, ಅಷ್ಟರೊಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ದರಗಳನ್ನು ಇಳಿಸಬಹುದು, ಸಾಧ್ಯವಾದರೇ ಉಚಿತ ಯೋಜನೆಗಳನ್ನು ಘೋಷಿಸಬಹುದು ಎಂದರು.