ಹೊಸದಿಲ್ಲಿ: ವಿವಾದಾತ್ಮಕ ಭಾಷಣ ಮಾಡಿದ ಕಾಳಿಚರಣ್ ಮಹಾರಾಜ್ ಬಂಧನವಾದ ಬೆನ್ನಲ್ಲೇ ಧರ್ಮ ಸಂಸದ್ ಆಯೋಜನೆಯ ಹೊಣೆಗಾರಿಕೆಯನ್ನು ತಪ್ಪಿಸಲು ಬಿಜೆಪಿ ಯತ್ನಿಸಿದ್ದು, ರಾಯ್‌ಪುರದ ಧರ್ಮಸಂಸದ್ ಕಾಂಗ್ರೆಸ್ ಮತ್ತು ಎನ್‌ಸಿಪಿ ಆಯೋಜಿಸಿತ್ತು ಎಂದು ಆರೋಪಿಸಿದೆ.
ಈ ಕುರಿತ ಹೇಳಿಕೆ ನೀಡಿರುವ ಛತ್ತೀಸ್‌ಗಢದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಬ್ರಿಜ್ ಮೋಹನ್ ಅಗರ್ವಾಲ್, ಧ್ರರ್ಮ ಸಂಸದ್ ಕಾರ್ಯಕ್ರಮದ ಆಯೋಜಕರು ಕಾಂಗ್ರೆಸ್ ಮತ್ತು ಎನ್‌ಸಿಪಿ ಎಂದು ಹೇಳಿದ್ದಾರೆ.
“ಮಾಜಿ ಕಾಂಗ್ರೆಸ್ ಶಾಸಕ ಮತ್ತು ಛತ್ತೀಸ್‌ಗಢ ಗೋ ಸೇವಾ ಆಯೋಗದ ಅಧ್ಯಕ್ಷರಾದ ಮಹಂತ್ ರಾಮ್ ಸುಂದರ್ ದಾಸ್ ಅವರು ಸಂಘಟಕರಲ್ಲಿ ಒಬ್ಬರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಾಸ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕಾರ್ಯಕ್ರಮ ಸಂಘಟಕರಲ್ಲಿ ರಾಯ್‌ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಅಧ್ಯಕ್ಷರಾದ ಪಮೋದ್ ದುಬೆ ಮತ್ತು ಸಂಸದೀಯ ಕಾರ್ಯದರ್ಶಿ ವಿಕಾಶ್ ಉಪಾಧ್ಯಾಯ ಅವರೂ ಸೇರಿದ್ದಾರೆ. ಸಂಘಟಕರೆಲ್ಲಾ ಕಾಂಗ್ರೆಸ್ ಮತ್ತು ಎನ್’ಸಿಪಿ ಮುಖಂಡರಾಗಿದ್ದಾರೆ ಎಂದು ಅಗರ್ವಾಲ್ ಆರೋಪಿಸಿದ್ದಾರೆ.