2021 ಕ್ರಿಶ್ಚಿಯನ್ನರಿಗೆ ಭಾರತದಲ್ಲಿ ಕರಾಳ ವರ್ಷ: 486 ದ್ವೇಷ ಮತ್ತು ಹಿಂಸಾತ್ಮಕ ಘಟನೆಗಳು ಅಂಕಿಅಂಶಗಳೊಂದಿಗೆ ಬಹಿರಂಗ

Prasthutha: January 1, 2022

ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರ ಮೇಲೆ 486 ಕ್ಕೂ ಅಧಿಕ ಹಿಂಸಾಚಾರ ಮತ್ತು ದ್ವೇಷದ ಕೃತ್ಯಗಳಿಗೆ 2021 ಸಾಕ್ಷಿಯಾಗಿದೆ. 2021 ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ಮತ್ತು ಹಿಂಸಾತ್ಮಕ ವರ್ಷವೆಂದೇ ಕ್ರಿಶ್ಚಿಯನ್ ಸಮುದಾಯ ಬಣ್ಣಿಸಿದೆ. ರಾಷ್ಟ್ರೀಯ ಜನಸಂಖ್ಯೆಯ ಶೇಕಡಾ 2.3 ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕ್ರಿಶ್ಚಿಯನ್ ಸಮುದಾಯದ ವಿರುದ್ಧದ ಹಿಂಸಾಚಾರದಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಬೆಳವಣಿಗೆಯು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭಯಾನಕ ಮಟ್ಟವನ್ನು ತಲುಪಿದೆ ಎಂದು ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (UCF) ವರದಿ ಮಾಡಿದೆ.

ಮೋದಿ ಸರ್ಕಾರದ ಮುದ್ದಿನ ನುಡಿಗಟ್ಟು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಭಾರತದ ಕ್ರಿಶ್ಚಿಯನ್ ಸಮುದಾಯಕ್ಕೆ ಪೊಳ್ಳು ಭರವಸೆ ಎಂಬುದು ಸಾಬೀತಾದಂತಾಗಿದೆ ಎಂದು UCF ಇಂಡಿಯಾದ ರಾಷ್ಟ್ರೀಯ ಸಂಯೋಜಕ ಎ.ಸಿ. ಮೈಕಲ್ ತಿಳಿಸಿದ್ದಾರೆ.
ದೆಹಲಿ ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯ ಮೈಕಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 2014 ರಲ್ಲಿ ಬಿಜೆಪಿ ಪಕ್ಷವು ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಹಿಡಿತ ಸಾಧಿಸಿದಾಗಿನಿಂದ ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರದ ಘಟನೆಗಳಲ್ಲಿ ಹೆಚ್ಚಳವಾಗಿರುವುದನ್ನು UCF ವರದಿ ಮಾಡಿದೆ.

UCF ವರದಿಯ ಪ್ರಕಾರ 2021 ರ ಕೊನೆಯಲ್ಲಿ ಅಂದರೆ ನವೆಂಬರ್, ಡಿಸೆಂಬರ್ ನಲ್ಲಿ 104 ಘಟನೆಗಳು ನಡೆದಿದೆ. ಅದೇ ರೀತಿ 2021 ರ ಆರಂಭದ ಜನವರಿಯಲ್ಲಿ 37, ಪೆಬ್ರವರಿ 20, ಮಾರ್ಚ್ 27, ಏಪ್ರಿಲ್ 27, ಮೇ 15, ಜೂನ್ 27, ಜುಲೈ 33 ಆಗಸ್ಟ್ 50, ಸೆಪ್ಟೆಂಬರ್ 69, ಅಕ್ಟೋಬರ್ 77, ನವೆಂಬರ್ 56 ಮತ್ತು ಡಿಸೆಂಬರ್ 48 ಹಿಂಸಾತ್ಮಕ ಘಟನೆಗಳು ವರದಿಯಾಗಿದೆ.

ಮಾತ್ರವಲ್ಲ UCF ಸಹಾಯವಾಣಿಯಲ್ಲಿ ದಾಖಲಾದ ವರದಿಗಳ ಪ್ರಕಾರ , 2014 ರಿಂದ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಹಿಂಸಾಚಾರದ ಘಟನೆಯಲ್ಲಿ ತೀವ್ರವಾಗಿ ಹೆಚ್ಚಾಗಿದೆ. 2014 ರಲ್ಲಿ 127, 2015 ರಲ್ಲಿ 142, 2016 ರಲ್ಲಿ 226, 2017 ರಲ್ಲಿ 248, 2018 ರಲ್ಲಿರಲ್ಲಿ 292, 2019 ರಲ್ಲಿ 328, 2020 ರಲ್ಲಿ 279 ಮತ್ತು 2021 ರಲ್ಲಿ 486 ಘಟನೆಗಳು ವರದಿಯಾಗಿದೆ.

ಮಾತ್ರವಲ್ಲ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ 102, ಛತ್ತೀಸ್ ಗಢ 90, ಜಾರ್ಖಂಡ್ 44 ಮತ್ತು ಮಧ್ಯ ಪ್ರದೇಶ 38 ಕ್ರಿಶ್ಚಿಯನ್ನರ ವಿರುದ್ಧ ಒಟ್ಟು 274 ಹಿಂಸಾಚಾರ ಘಟನೆಗಳು ದಾಖಲಿಸಿವೆ.

ಕ್ರಿಶ್ಚಿಯನ್ ಧರ್ಮದ ಮೇಲೆ ನಂಬಿಕೆಯಿರಿಸಿದ ಕಾರಣಕ್ಕಾಗಿ ಬಿಹಾರದಲ್ಲಿ 29, ತಮಿಳುನಾಡಿನಲ್ಲಿ 20, ಒರಿಸ್ಸಾದಲ್ಲಿ 20, ಮಹಾರಾಷ್ಟ್ರದಲ್ಲಿ 17, ಹರ್ಯಾಣದಲ್ಲಿ 12, ಪಂಜಾಬ್ 10, ಆಂಧ್ರಪ್ರದೇಶ 9, ಗುಜರಾತ್ 7, ಉತ್ತರಾಖಂಡ 8, ದೆಹಲಿ 8, ತೆಲಂಗಾಣ 3, ಹಿಮಾಚಲ ಪ್ರದೇಶ 3, ಪಶ್ಚಿಮ ಬಂಗಾಳ 2, ರಾಜಸ್ಥಾನ 2, ಅಸ್ಸಾಮ್ 1 ಮತ್ತು ಜಮ್ಮ,ಕಾಶ್ಮೀರದಲ್ಲಿ 1 ಹಿಂಸಾತ್ಮಕ ಘಟನೆಗಳು ವರದಿಯಾಗಿದೆ.

ಸದ್ಯ ಮತಾಂತದ ವಿರೋಧಿ ಕಾನೂನುಗಳು ಕ್ರಿಶ್ಚಿಯನ್ ಸಮುದಾಯದ ಮೇಲೆ ಕಿರುಕುಳ ನೀಡುವ ಸಾಧನವಾಗಿ ಬಳಸಲಾಗುತ್ತಿದೆ ಎಂದು UCF ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!