ಹರ್ ಘರ್ ತಿರಂಗಾ ಪೋಸ್ಟರ್ ನಲ್ಲಿ ಅರಬ್ ಕುಟುಂಬದ ಫೋಟೋ ಪ್ರಕಟಿಸಿದ ಬಿಜೆಪಿ: ಇದು ನಾಚಿಕೆಗೇಡು ಎಂದ ನೆಟ್ಟಿಗರು

Prasthutha|

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರ ಪ್ರಾಯೋಜಿಸಿರುವ ಹರ್ ಘರ್ ತಿರಂಗಾ ಅಭಿಯಾನದ ಪೋಸ್ಟರ್ ನಲ್ಲಿ ಅರಬ್ ಕುಟುಂಬವೊಂದರ ಚಿತ್ರವನ್ನು ಬಿಜೆಪಿ ಪ್ರಕಟಿಸಿ ಮುಜುಗರಕ್ಕೀಡಾಗಿದೆ.

- Advertisement -

ಬಿಜೆಪಿ ಹರ್ ಘರ್ ತಿರಂಗಾ ಪೋಸ್ಟರ್ ನಲ್ಲಿ ಮುಸ್ಲಿಮರನ್ನು ಪ್ರತಿನಿಧಿಸಲು ಅರಬ್ ಕುಟುಂಬವೊಂದರ ಚಿತ್ರ ಅಳವಡಿಸಿದ್ದು ಈ ಪೋಸ್ಟರ್ ವೈರಲ್ ಆಗಿದೆ. ಭಾರತದ ಸ್ವಾತಂತ್ರ್ಯದ ಅಭಿಯಾನದ ಪೋಸ್ಟರ್ ನಲ್ಲಿ ಅರಬಿಗಳ ಚಿತ್ರ ಯಾಕೆ ಎಂದು ಸಾಮಾಜಿಕ ವಲಯಗಳಲ್ಲಿ ಚರ್ಚೆಯಾಗುತ್ತಿದೆ.

- Advertisement -

ಅರಬ್ ಕುಟುಂಬವೊಂದರ ಫೋಟೋ ಪ್ರಕಟಿಸಿದ ಬಿಜೆಪಿಗೆ ಭಾರತೀಯ ಮುಸ್ಲಿಮರ ಫೋಟೋ ದೊರಕಿಲ್ಲ ಮಾತ್ರವಲ್ಲದೆ ಬಿಜೆಪಿಗೆ ಅಲ್ಪ ಸಂಖ್ಯಾತ ಮೋರ್ಚಾ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕುಟುಂಬ ಸದಸ್ಯರ ಚಿತ್ರವೂ ಸಿಗಲಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅರಬ್ ಕುಟುಂಬ, ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಪೋಸ್ಟರ್ ನಲ್ಲಿ , ಇದು ಭಾರತೀಯರು ತಲೆ ತಗ್ಗಿಸುವಂತ ವಿಷಯ ಎಂದು ಆರೋಪಿಸಿದ್ದಾರೆ.



Join Whatsapp