ಪ್ರವಾಹ ಪರಿಹಾರದಲ್ಲಿ ಕೊಡಗು ಜಿಲ್ಲೆಗೆ ಅನ್ಯಾಯ: ಕಾಂಗ್ರೆಸ್ ಮುಖಂಡ ಮಂತರ್ ಗೌಡ

Prasthutha|

ಮಡಿಕೇರಿ: ಪ್ರವಾಹ ಪರಿಹಾರವಾಗಿ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಕೊಡಗು ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಕಡೆಗಣಿಸಿರುವ ಬಗ್ಗೆ ಕಾಂಗ್ರೆಸ್ ಮುಖಂಡ ಡಾ. ಮಂತರ್ ಗೌಡ ಅಸಮಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಹಾಗೂ ವರುಣನ ಅಬ್ಬರಕ್ಕೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿಗಳು ಯಾಕೆ ಅನ್ಯಾಯ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆ ಕರ್ನಾಟಕದ ಭಾಗವಲ್ಲವೇ? ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಶಾಸಕರು, ವಿಧಾನ ಪರಿಷತ್ ಸದಸ್ಯರು ನಿಮ್ಮ ಸರಕಾರದ ಭಾಗವಲ್ಲವೇ? ಕೊಡಗಿನ ಜನರು ಬಿಜೆಪಿ ಪಕ್ಷಕ್ಕೆ ನೀಡಿದ ಮತಗಳಿಗೆ  ಪ್ರತಿಯಾಗಿ ನೀಡಿದ ಗೌರವವೇ? ಅಥವಾ ನಿರ್ಲಕ್ಷ್ಯವೇ? ತಾತ್ಸಾರವೇ ಎಂದು ಡಾ. ಮಂತರ್ ಗೌಡ ಪ್ರಶ್ನಿಸಿದರು.

ಕೂಡಲೇ ಮುಖ್ಯಮಂತ್ರಿಗಳು  ಕೊಡಗು ಜಿಲ್ಲೆಗೆ ಮಳೆಹಾನಿ ಪರಿಹಾರವಾಗಿ  ವಿಶೇಷ ಪ್ಯಾಕೇಜ್ ಘೋಷಣೆ ಮಾಡವಂತೆ ಆಗ್ರಹಿಸಿದರು.

Join Whatsapp