ಒಡಿಶಾ | ಬಿಜೆಪಿ ನಾಯಕ ಬೈಜಯಂತ್ ಪಾಂಡಾರ ನ್ಯೂಸ್ ಚಾನೆಲ್ ನ ಸಿಎಫ್ ಒ ಬಂಧನ

Prasthutha|

ಭುವನೇಶ್ವರ : ಒಡಿಶಾ ಬಿಜೆಪಿ ಮುಖಂಡ ಬೈಜಯಂತ್ ಕುಟುಂಬ ಮಾಲಕತ್ವದ ‘ಒ ಟಿವಿ’ಯ ಮುಖ್ಯ ಹಣಕಾಸು ಅಧಿಕಾರಿ ಮನೋರಂಜನ್ ಸಾರಂಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಕೆಲ ವ್ಯಕ್ತಿಗಳು ಒಡಿಶಾ ಪೊಲೀಸ್ ನ ಆರ್ಥಿಕ ಅಪರಾಧಗಳ ವಿಭಾಗ ಈ ಕ್ರಮ ಕೈಗೊಂಡಿದೆ.

ಅಕ್ರಮವಾಗಿ ಭೂಮಿ ಖರೀದಿಸಿದ ಆರೋಪದಲ್ಲಿ ಈ ಬಂಧನ ನಡೆದಿದೆ. ಖುರ್ದಾ ಜಿಲ್ಲೆಯ ಬೆಗುನಿಯಾ ತಾಲೂಕಿನ ಸರೂವಾ ಗ್ರಾಮದಲ್ಲಿ ಒಡಿಶಾ ಇನ್ ಫ್ರಾಟೆಕ್ ಪ್ರೈವೆಟ್ ಲಿಮಿಟೆಡ್ ಅಕ್ರಮವಾಗಿ ಭೂಮಿ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಾರಂಗಿ ಕಂಪೆನಿಯ ನಿರ್ದೇಶಕರೂ ಆಗಿದ್ದಾರೆ.

- Advertisement -

“ಒಡಿಶಾ ಇನ್ ಫ್ರಾಟೆಕ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪೆನಿ ಪರಿಶಿಷ್ಟ ಜಾತಿಯರವಿಗೆ ಸೇರಿದ ಭೂಮಿಯನ್ನು ಅವರಿಗೆ ನಷ್ಟ ಮಾಡುವ ಉದ್ದೇಶದಿಂದ, ನಿಯಮಾವಳಿ ಉಲ್ಲಂಘಿಸಿ ಖರೀದಿಸಲಾಗಿದೆ’’ ಎಂದು ಆರ್ಥಿಕ ಅಪರಾಧಗಳ ವಿಭಾಗದ ಹೇಳಿಕೆಯಲ್ಲಿ ತಿಳಿಸಲಾಗಿದೆ.

- Advertisement -