ಅಚ್ಚೇ ದಿನ್! | ಇನ್ನು ಬ್ಯಾಂಕ್ ಗಳಲ್ಲಿ ನಿಮ್ಮ ಹಣ ಡೆಪಾಸಿಟ್ ಮಾಡಲು, ವಿತ್ ಡ್ರಾಕ್ಕೂ ದುಬಾರಿ ಶುಲ್ಕ

Prasthutha|

ನವದೆಹಲಿ : ಒಂದೆಡೆ ಕೊರೊನ ಸಂಕಷ್ಟವಾದರೆ, ಇನ್ನೊಂದೆಡೆ ಈಗಾಗಲೇ ಪ್ರಪಾತಕ್ಕೆ ಇಳಿದಿದ್ದ ದೇಶದ ಆರ್ಥಿಕತೆಯ ಹೊಡೆತ ದೇಶದ ನಾಗರಿಕರನ್ನು ಇನ್ನಿಲ್ಲದ ಕಷ್ಟಗಳಿಗೆ ದೂಡುತ್ತಿದೆ. ಈ ನಡುವೆ, ಬ್ಯಾಂಕ್ ಗಳ ವ್ಯವಹಾರ ನಡೆಸಲೂ, ಜನತೆ ತಮ್ಮ ದುಡ್ಡನ್ನು ಡೆಪಾಸಿಟ್ ಮಾಡಲು, ಹಿಂಪಡೆಯಲೂ ದುಬಾರಿ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

- Advertisement -

ವರದಿಗಳ ಪ್ರಕಾರ, ಬ್ಯಾಂಕ್ ಆಫ್ ಬರೋಡ, ನೀವು ನಿಮ್ಮ ಹಣ ಡೆಪಾಸಿಟ್ ಮಾಡಲು, ನಗದು ಹಿಂಪಡೆಯಲು ನ.1ರಿಂದ ಸೂಚಿತ ಮಿತಿಗಳನ್ನು ಮೀರಿದ ದುಬಾರಿ ಶುಲ್ಕವನ್ನು ವಿಧಿಸಲು ಆರಂಬಿಸಿದೆ ಎಂದು ತಿಳಿದುಬಂದಿದೆ. ಇನ್ನೂ ಕೆಲವು ಬ್ಯಾಂಕ್ ಗಳು ಇದೇ ಹಾದಿ ತುಳಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಬ್ಯಾಂಕ್ ಆಫ್ ಇಂಡಿಯಾ, ಪಿಎನ್ ಬಿ, ಆಕ್ಸಿಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಗಳು ಕೂಡ ಇದೇ ಮಾದರಿಯ ದುಬಾರಿ ಶುಲ್ಕ ವಿಧಿಸಲು ಚಿಂತನೆ ನಡೆಸಿವೆ, ಆದರೆ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ವರದಿಯೊಂದು ತಿಳಿಸಿದೆ.  

ಬ್ಯಾಂಕ್ ಆಫ್ ಬರೋಡ ಕರೆಂಟ್ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್ ಗಳ ವ್ಯವಹಾರಗಳಿಗೆ ಸಂಬಂಧಿಸಿ ಪ್ರತ್ಯೇಕ ದರ ನಿಗದಿಪಡಿಸಿದೆ.

- Advertisement -

ಲೋನ್ ಅಕೌಂಟ್ ನಲ್ಲಿ ತಿಂಗಳಿಗೆ ಮೂರು ಬಾರಿ ಹಣ ವಿತ್ ಡ್ರಾ ಮಾಡಬಹುದು. ಅದರ ನಂತರ 150 ರು. ಶುಲ್ಕ ವಿಧಿಸಲಾಗುತ್ತದೆ ಎಂದು ‘ಇಂಡಿಯಾ ಟಿವಿ ನ್ಯೂಸ್’ ವರದಿಯಲ್ಲಿ ತಿಳಿಸಲಾಗಿದೆ.

ಅದೇ ರೀತಿ ಉಳಿತಾಯ ಖಾತೆ(ಸೇವಿಂಗ್ಸ್ ಅಕೌಂಟ್)ಯಲ್ಲಿ ತಿಂಗಳಲ್ಲಿ ಮೂರು ಬಾರಿ ಮಾತ್ರ ಹಣ ಡೆಪಾಸಿಟ್ ಮಾಡಲು ಉಚಿತ ಅವಕಾಶವಿರುತ್ತದೆ. ಆದರೆ, ಗ್ರಾಹಕ ನಾಲ್ಕನೇ ಬಾರಿಗೆ ಹಣ ಡೆಪಾಸಿಟ್ ಮಾಡಲು ಪ್ರತಿ ಬಾರಿ 40 ರೂ. ಹಣ ಪಾವತಿಸಬೇಕು.

ಈ ದುಬಾರಿ ಶುಲ್ಕದಲ್ಲಿ ಹಿರಿಯ ನಾಗರಿಕರಿಗೂ ವಿನಾಯತಿ ನೀಡಿಲ್ಲ. ವಿವಿಧ ಖಾತೆಗಳ ವಿವಿಧ ವ್ಯವಹಾರಗಳಿಗೆ ವಿಧಿಸಲಾಗಿರುವ ಶುಲ್ಕದ ವಿವರ ಈ ಕೆಳಗಿನಂತಿವೆ.

ಸಿಸಿ, ಕರೆಂಟ್ ಮತ್ತು ಓವರ್ ಡ್ರಾಫ್ಟ್ ಅಕೌಂಟ್ ಗಳು

  • 1 ಲಕ್ಷ ರೂ. ವರೆಗಿನ ಡೆಪಾಸಿಟ್ – ಉಚಿತ
  • 1 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತ ಡೆಪಾಸಿಟ್ ಮಾಡುವುದಾದರೆ, ಪ್ರತಿ 1,000 ರೂ.ಗೆ 1 ರೂ. ಶುಲ್ಕ ವಿಧಿಸಲಾಗುತ್ತದೆ. (ಕನಿಷ್ಠ 50 ರೂ. ಗರಿಷ್ಠ 20,000 ರೂ.)
  • ತಿಂಗಳಲ್ಲಿ ಮೂರು ಬಾರಿ ಹಣ ವಿತ್ ಡ್ರಾ ಮಾಡುವುದು – ಶುಲ್ಕ ಇಲ್ಲ
  • ನಾಲ್ಕನೇ ಬಾರಿ ಹಣ ವಿತ್ ಡ್ರಾ ಮಾಡುವುದು – ಪ್ರತಿ ವಿತ್ ಡ್ರಾಗೆ 150 ರೂ.

ಉಳಿತಾಯ ಖಾತೆ (ಸೇವಿಂಗ್ಸ್ ಅಕೌಂಟ್) ಗ್ರಾಹಕರು

  • ತಿಂಗಳಿಗೆ ಮೂರು ಬಾರಿ ಡೆಪಾಸಿಟ್ ಮಾಡುವುದಕ್ಕೆ – ಉಚಿತ
  • ನಾಲ್ಕನೇ ಬಾರಿ ಡೆಪಾಸಿಟ್ ಮಾಡುವುದಕ್ಕೆ – ಪ್ರತಿಬಾರಿ ತಲಾ 40 ರೂ.
  • ತಿಂಗಳಲ್ಲಿ ಮೂರು ಬಾರಿ ಹಣ ವಿತ್ ಡ್ರಾ ಮಾಡುವುದಕ್ಕೆ – ಶುಲ್ಕ ಇಲ್ಲ
  • ನಾಲ್ಕನೇ ಬಾರಿ ಮತ್ತು ಅದರ ನಂತರದ ವಿತ್ ಡ್ರಾಗಳಿಗೆ – ಪ್ರತಿ ವಿತ್ ಡ್ರಾಕ್ಕೆ ತಲಾ 100 ರೂ.
  • ಹಿರಿಯ ನಾಗರಿಕರಿಗೆ ವಿನಾಯತಿಯಿಲ್ಲ. ಅವರು ಕೂಡ ಶುಲ್ಕ ಪಾವತಿಸಲೇ ಬೇಕು.

ನವೆಂಬರ್ ಸರಣಿ ಹಬ್ಬಗಳ ತಿಂಗಳಾಗಿರುವುದರಿಂದ, ಈ ತಿಂಗಳಲ್ಲಿ ಬ್ಯಾಂಕ್ ಗಳು ಕೇವಲ 15 ದಿನ ಮಾತ್ರ ಕಾರ್ಯಾಚರಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶಕ್ಕೆ ‘ಅಚ್ಚೇ ದಿನ್ (ಒಳ್ಳೆಯ ದಿನ)’ ಬರುತ್ತದೆ ಎಂದು ಬಿಜೆಪಿಗರು 2014ರ ಸಾರ್ವತ್ರಿಕ ಚುನಾವಣೆಗೆ ಮೊದಲು ಘೋಷಿಸಿದ್ದರು. ಆ ಪ್ರಕಾರ ಅವರು ಅಧಿಕಾರಕ್ಕೆ ಬಂದದ್ದೂ ಆಯಿತು. ಆದರೆ, ಅದ್ಯಾವ ಗಳಿಗೆಯಲ್ಲಿ ಅವರು ಅಧಿಕಾರಕ್ಕೆ ಬಂದರೋ, ಅಂದಿನಿಂದ ದೇಶದ ಜನತೆಗೆ ಒಳ್ಳೆಯ ದಿನಗಳಿಗಿಂತ ಕೆಟ್ಟ ದಿನಗಳೇ ಹೆಚ್ಚು ಅನ್ನುವಂತಹ ಅನುಭವ ನಾಗರಿಕರಿಗೆ ದಿನನಿತ್ಯ ಆಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.  

Join Whatsapp