ಕಳ್ಳನ ಮೈಯಲ್ಲಿ ‘ನಮೋ ಎಗೈನ್’ ಟಿ-ಶರ್ಟ್! | ವ್ಯಂಗ್ಯಕ್ಕೆ ಹೆದರಿ ಟ್ವೀಟ್ ಅಳಿಸಿದ ಪೊಲೀಸರು

Prasthutha|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 2019ರ ಚುನಾವಣಾ ಪ್ರಚಾರದ ಪ್ರಮುಖ ಘೋಷಣೆ ‘ನಮೋ ಎಗೈನ್ (ಮತ್ತೊಮ್ಮೆ ನಮೋ) ಎಂದು ಮುದ್ರಿತವಾಗಿದ್ದ ಟಿ-ಶರ್ಟ್ ಧರಿಸಿದ್ದ ಕಳ್ಳತನ ಆರೋಪಿಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿಗೆ ಕಾರಣವಾದ ಬೆನ್ನಲ್ಲೇ, ಗಾಝಿಯಾಬಾದ್ ಪೊಲೀಸರು ಆ ಕುರಿತ ತಮ್ಮ ಟ್ವೀಟ್ ಅಳಿಸಿ ಹಾಕಿದ ಘಟನೆ ನಡೆದಿದೆ.

ಯೂತ್ ಕಾಂಗ್ರೆಸ್ ಮುಖಂಡ ಬಿ.ವಿ. ಶ್ರೀನಿವಾಸ್ ಟ್ವಿಟರ್ ನಲ್ಲಿ ಈ ಕುರಿತು ತಮಾಷೆಯ ಟ್ವೀಟ್ ಮಾಡಿದ ಬೆನ್ನಲ್ಲೇ, ಅದು ವೈರಲ್ ಆಗಿ ಆಡಳಿತಾರೂಢ ಬಿಜೆಪಿಗರಿಗೆ ಸಾಕಷ್ಟು ಮುಜುಗರವನ್ನುಂಟು ಮಾಡಿತ್ತು.

- Advertisement -

ನಾಲ್ವರು ಕಳ್ಳರ ಫೋಟೊಗಳನ್ನು ಹಂಚಿಕೊಂಡಿದ್ದ ಗಾಝಿಯಾಬಾದ್ ಪೊಲೀಸರು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ “ಲೋನಿ ಬಾರ್ಡರ್ ಪೊಲೀಸರು ಅಂಗಡಿಯೊಂದರಲ್ಲಿ ನಡೆದಿರುವ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು, ನಾಲ್ವರು ಕಳ್ಳರನ್ನು ಬಂಧಿಸಲಾಗಿದೆ. ಅವರಿಂದ 14 ಕದ್ದ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಸಂಬಂಧಿಸಿ ಪ್ರಧಾನಿ ಮೋದಿ ಅವರನ್ನು ವ್ಯಂಗ್ಯವಾಡಿದ್ದ ಯುವ ಕಾಂಗ್ರೆಸ್ ನಾಯಕ ಬಿ.ವಿ. ಶ್ರೀನಿವಾಸ್, ಗಾಝಿಯಾಬಾದ್ ಪೊಲೀಸರು ಬಂಧಿಸಿರುವ ಕಳ್ಳನನ್ನು ಆತ ಧರಿಸಿರುವ ಬಟ್ಟೆಯಲ್ಲೇ ಗುರುತಿಸಬಹುದು. ಅಂಧ ಅನುಯಾಯಿಗಳಿಗೆ ಈ ಉದ್ಯೋಗ ಮಾತ್ರವೇ ಉಳಿದಿದೆಯೇ? ಎಂದು ಪ್ರಶ್ನಿಸಿದ್ದರು.

- Advertisement -