ದೇಶದ ಜನತೆಯನ್ನು ಆತ್ಮಹತ್ಯೆಗೆ ತಳ್ಳುತ್ತಿರುವ ಬಿಜೆಪಿ ಸರ್ಕಾರ: ಸುರ್ಜೆವಾಲಾ

Prasthutha|

►ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಅಂಕಿಅಂಶ ಬಹಿರಂಗಪಡಿಸಿದ ಕಾಂಗ್ರೆಸ್ ನಾಯಕ

- Advertisement -

ಹೊಸದಿಲ್ಲಿ: ಬಿಜೆಪಿ ಸರ್ಕಾರವು ದೇಶದ ಜನತೆಯನ್ನು ಆತ್ಮಹತ್ಯೆಗೆ ತಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ದೇಶದಲ್ಲಿ ಆತ್ಮಹತ್ಯೆಗಳ ಗಣನೀಯ ಏರಿಕೆಯ ಬಗ್ಗೆ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (NCRB) ವರದಿಯನ್ನು ಬಹಿರಂಗಪಡಿಸಿದ ಸುರ್ಜೇವಾಲಾ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.55ರಷ್ಟು, ನಿರುದ್ಯೋಗಿಗಳು ಶೇ.58ರಷ್ಟು ಮತ್ತು ರೈತರು, ಕೂಲಿಕಾರ್ಮಿಕರು ಮತ್ತು ದಿನಗೂಲಿ ನೌಕರರ ಸಂಖ್ಯೆ ಶೇ.139.37ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

2014 ಮತ್ತು 2020 ರ ನಡುವಿನ ಕಳೆದ ಏಳು ವರ್ಷಗಳಲ್ಲಿ ಮೋದಿ ಸರ್ಕಾರದ ವೈಫಲ್ಯ ಮತ್ತು ಅಭಾಗಲಬ್ಧ ನೀತಿಗಳು 9,58,275 ಭಾರತೀಯರನ್ನು ಆತ್ಮಹತ್ಯೆಗೆ ತಳ್ಳಿವೆ ಎಂದು ಕಾಂಗ್ರೆಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಪ್ರಕಾರ, 2020 ರಲ್ಲಿ ಭಾರತದಲ್ಲಿ ಒಟ್ಟು 1,53,052 ಆತ್ಮಹತ್ಯೆಗಳು ವರದಿಯಾಗಿವೆ. 2019ಕ್ಕೆ ಹೋಲಿಸಿದರೆ 2020 ರಲ್ಲಿ ಆತ್ಮಹತ್ಯೆಗಳ ಸಂಖ್ಯೆ 10 ಶೇ ಹೆಚ್ಚಾಗಿವೆ.



Join Whatsapp