ಯುಎಇ ಉದ್ಯೋಗ: ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದ ಎಮಿರೇಟ್ಸ್ ಕಂಪೆನಿ

Prasthutha|

ದುಬೈ: ಯುಎಇ ಪ್ರಮುಖ್ಯ ವಿಮಾನಯಾನ ಕಂಪೆನಿಯಾದ ಎಮಿರೇಟ್ಸ್ ಮುಂಬರುವ ತಿಂಗಳಲ್ಲಿ ಸುಮಾರು 6000 ಕ್ಕೂ ಮಿಕ್ಕಿದ ಉದ್ಯೋಗಿಗಳನ್ನು ವಿವಿಧ ಹುದ್ದೆಗಳಿಗೆ ನೇಮಿಸಿಕೊಳ್ಳಲಿದೆ ಎಂದು ತಿಳಿಸಿವೆ. ವಾಯುಯಾನ ವಲಯದಲ್ಲಿ ತನ್ನ ನೆಟ್ ವರ್ಕ್ ಅನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

- Advertisement -

ಸೆಪ್ಟೆಂಬರ್ ನಲ್ಲಿ ಎಮಿರೇಟ್ಸ್ ತನ್ನ ದುಬೈ ಹಬ್ ಗೆ ಸೇರಲು 3000 ಕ್ಯಾಬಿನ್ ಸಿಬ್ಬಂದಿ ಮತ್ತು 500 ವಿಮಾನ ನಿಲ್ದಾಣ ಸೇವೆಗಳ ಉದ್ಯೋಗಿಗಳನ್ನು ನೇಮಿಸಲು ವಿಶ್ವಾದ್ಯಂತ ಅಭಿಯಾನವನ್ನು ಆರಂಭಿಸಿತ್ತು. ಸದ್ಯ ಏರ್ ಲೈನ್ ಗೆ ದುಬೈ ನಲ್ಲಿ ಇನ್ನಿತರ ಸ್ಥಳದಲ್ಲಿ ಹೆಚ್ಚುವರಿ 700 ಗ್ರೌಂಡ್ ಸಿಬ್ಬಂದಿಗಳ ಅಗತ್ಯವಿದೆ.

ಎಮಿರೇಟ್ಸ್ ಕಂಪೆನಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹತ್ತಾರು ನೂತನ ಉದ್ಯೋಗಗಳ ಪಟ್ಟಿಮಾಡಿದೆ. ಕ್ಯಾಬಿನ್ ಸಿಬ್ಬಂದಿ, ಆಡಳಿತಾತ್ಮಕ ನಿರ್ವಹಣಾಧಿಕಾರಿ, ಆರೋಗ್ಯ ಸಿಬ್ಬಂದಿ, ವೃತ್ತಿಪರ ಮಾನವ ಸಂಪನ್ಮೂಲ ಎಕ್ಸಿಕ್ಯೂಟಿವ್, ವಿಮಾನ ನಿಲ್ದಾಣ ಸೇವಾ ಏಜೆಂಟ್, ಅಕೌಂಟೆಂಟ್ ಸೇರಿದಂತೆ ಹಲವು ಉದ್ಯೋಗಗಳು ಪಟ್ಟಿ ಮಾಡಲಾಗಿದೆ.

- Advertisement -

ಮಾತ್ರವಲ್ಲ ಎಮಿರೇಟ್ಸ್ ಕ್ಯಾಬಿನ್ ಕ್ರ್ಯೂ, ಕೇಂದ್ರ ಸಂಪರ್ಕಾಧಿಕಾರಿ, ಪೈಲೆಟ್, ಬೋರ್ಡಿಂಗ್ ಸಂಯೋಜಕರು, ಹಿರಿಯ ಸಹಾಯಕ ಅಕೌಂಟೆಂಟ್, ಕಸ್ಟಮರ್ ಕೇರ್ ಮತ್ತು ಸೇವಾ ಏಜೆಂಟ್, ಹಿರಿಯ ಸಲಹೆಗಾರ, ಮನಶಾಸ್ತ್ರಜ್ಞ, ಮಾನವ ಸಂಪನ್ಮೂಲ ಮ್ಯಾನೇಜರ್, ತಂಡದ ವ್ಯವಸ್ಥಾಪಕ, ಸೇಲ್ಸ್ ಮತ್ತು ನಿರ್ವಹಣಾ ತಜ್ಞ, ಮಾರ್ಕೆಟಿಂಗ್ ಮ್ಯಾನೇಜರ್, ಡಾಕ್ಟರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ.

Join Whatsapp