ಬಿಹಾರ:  ಮುಖ್ಯಮಂತ್ರಿಯನ್ನು ಹೊಗಳಿದ ಬಿಜೆಪಿ ಉಪಾಧ್ಯಕ್ಷ; ಪಕ್ಷದಿಂದ ಉಚ್ಚಾಟನೆ

Prasthutha|

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಗಳಿದ್ದಕ್ಕಾಗಿ ಶಿಸ್ತನ್ನು ಉಲ್ಲಂಘಿಸಿದ ಮತ್ತು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ  ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜಿಬ್ ರಂಜನ್ ಅವರನ್ನು ಪಕ್ಷದಿಂದ  ಉಚ್ಚಾಟಿಸಲಾಗಿದೆ .

- Advertisement -

ರಾಜ್ಯದಲ್ಲಿ ನಡೆಯುತ್ತಿರುವ ಕಳ್ಳಭಟ್ಟಿ, ಹೂಚ್ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರನ್ನು ಸಮರ್ಥಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  

ರಂಜನ್ ಅವರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ತಿಳಿಸಿದ್ದು, ನಿಮ್ಮ ಹೇಳಿಕೆಗಳು ರಾಜ್ಯದ ಉಪಾಧ್ಯಕ್ಷರು ಹೇಳುವ ಹೇಳಿಕೆಗಳಲ್ಲ. ಇವು ಪಕ್ಷದ ಘನತೆಗೆ ಕಳಂಕ ತರುತ್ತವೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

- Advertisement -

ಈ ಹೇಳಿಕೆಯನ್ನು ನಿರಾಕರಿಸಿರುವ ರಂಜನ್, ಪಕ್ಷವು ಉಚ್ಚಾಟನೆ ಆದೇಶ ನೀಡುವ ಮೊದಲೇ ತಾವು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ ಎರಡು ಗಂಟೆ ಬಳಿಕ ಅಮಾನತು ಆದೇಶ ಹೊರಡಿಸಲಾಗಿದೆ.

ಏಳು ವರ್ಷಗಳಿಂದ ಬಿಜೆಪಿಯಲ್ಲಿರುವ ರಂಜನ್ ಇದೀಗ ಮಾತೃ ಪಕ್ಷವಾದ ನಿತೀಶ್ ಅವರ ಸಂಯುಕ್ತ ಜನತಾದಳಕ್ಕೆ ಮರಳಬಹುದು ಎನ್ನಲಾಗುತ್ತಿದೆ.

Join Whatsapp