ಇತಿಹಾಸ ಪ್ರಸಿದ್ಧ ಅಮ್ಮೆಂಬಳ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಉಬೈದ್ BH ಆಯ್ಕೆ

Prasthutha|

ಇತಿಹಾಸ ಪ್ರಸಿದ್ಧ ಅಮ್ಮೆಂಬಳ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಉಬೈದ್ BH ಆಯ್ಕೆಯಾಗಿದ್ದಾರೆ.

- Advertisement -

ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆಯು ಡಿ.30 ರಂದು ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಮಹಲ್ ಖಾಝಿ ಕೂರತ್ ತಂಙಳ್ ನೇತೃತ್ವದಲ್ಲಿ ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ನಡೆಯಿತು. ಈ ಸಭೆಯಲ್ಲಿ 2023 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು.

 ಗೌರವಾಧ್ಯಕ್ಷರಾಗಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್, ಅಧ್ಯಕ್ಷರಾಗಿ ಉಬೈದ್ BH, ಉಪಾಧ್ಯಕ್ಷರನ್ನಾಗಿ ಕರೀಮ್ G, ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್ , ಜೊತೆ ಕಾರ್ಯದರ್ಶಿಯಾಗಿ ರಫೀಕ್ H, ಕೋಶಾಧಿಕಾರಿಯಾಗಿ ಆಸಿಫ್ T, ಲೆಕ್ಕಪರಿಶೋಧಕರಾಗಿ ಸಿರಾಜುದ್ದೀನ್ MSA, ಮನ್ಸೂರ್ G ಹಾಗೂ  ನೂತನ ಕಾರ್ಯಕಾರಿ ಸದಸ್ಯರಾಗಿ ಸಿದ್ಧೀಕ್ G, ಹನೀಫ್ bit, ಅಬ್ಬಾಸ್.S, ರಿಯಾಝ್ T, ನಿಜಾಮುದ್ದೀನ್, ಪರ್ವೀಝ್, ನಬೀಲ್ ಇವರನ್ನು ನೇಮಕ ಮಾಡಲಾಯಿತು.

Join Whatsapp