ಕಾಂಗ್ರೆಸ್ ಗೆ ಮರಳುವ ಯಾವುದೇ ಯೋಚನೆ ಇಲ್ಲ: ಗುಲಾಂ ನಬಿ ಆಜಾದ್

Prasthutha|

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮರಳುವ ಯಾವುದೇ ಯೋಚನೆಯಿಲ್ಲ ಎಂದು ರಾಜಕಾರಣಿ, ಡೆಮಾಕ್ರಟಿಕ್ ಆಜಾದ್ ಪಕ್ಷದ (ಡಿಎಪಿ) ಅಧ್ಯಕ್ಷ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ನ ಯಾವ ನಾಯಕರೂ ನನ್ನನ್ನು ಕರೆದಿಲ್ಲ. ಈ ರೀತಿಯ ಕತೆಗಳು ಮಾಧ್ಯಮಗಳಲ್ಲಿ ಹೇಗೆ ಹುಟ್ಟಿಕೊಂಡಿತು ಎನ್ನುವುದು ಗೊತ್ತಿಲ್ಲ. ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಅನಿಶ್ಚಿತತೆಯ ಪ್ರಜ್ಞೆಯನ್ನು ಮೂಡಿಸಲು ಮತ್ತು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ನಾಯಕರು ಈ ರೀತಿಯ ಊಹಾಪೋಹಗಳನ್ನು ಹಬ್ಬಿಸಿದ್ದಾರೆ. ಏನೇ ಬರಲಿ ನಾವು ಇನ್ನೂ ಬಲಿಷ್ಠರಾಗುತ್ತೇವೆ ಎಂದು ಹೇಳೀದ್ದಾರೆ.

ಗುಲಾಂ ನಬಿ ಆಜಾದ್ ಅವರು ಈ ವರ್ಷದ ಆರಂಭದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು.

Join Whatsapp