ಬಿಹಾರ: ಕೃಷಿ ಮಸೂದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಬಿಜೆಪಿ ಗೂಂಡಾಗಳಿಂದ ದಾಳಿ

Prasthutha: September 26, 2020

ಪಾಟ್ನಾ: ಬಿಹಾರ ವಿಧಾನ ಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿರುವಂತೆ ಬಿಜೆಪಿ ಬೆಂಬಲಿಗರೆಂದು ಹೇಳಲಾಗುವ ವ್ಯಕ್ತಿಗಳು ಪಾಟ್ನಾದಲ್ಲಿ ಜನ ಅಧಿಕಾರ ಪಕ್ಷ (ಜೆ.ಎ.ಪಿ)ದ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದು ವರದಿಯಾಗಿದೆ. ಈ ಕುರಿತಾಗಿನ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜೆ.ಎ.ಪಿ ನಾಯಕ ರಾಜೇಶ ರಂಜನ್ ಯಾನೆ ಪಪ್ಪು ಯಾದವ್  ಕೃಷಿ ಮಸೂದೆಯನ್ನು ವಿರೋಧಿಸಿ ಪಾಟ್ನಾದಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸುತ್ತಿದ್ದ ವೇಳೆ ಈ ದಾಳಿ ನಡೆದಿದೆ ಎನ್ನಲಾಗಿದೆ.

ರ‍್ಯಾಲಿಯ ವೇಳೆ ಜೀಪ್‌ನಲ್ಲಿದ್ದ ಅವರ ಬೆಂಬಲಿಗರಲ್ಲೊಬ್ಬರು ವೀರಚಂದ್ ಪಟೇಲ್ ರೋಡ್‌ನಲ್ಲಿರುವ ಬಿ.ಜೆ.ಪಿ ಕಚೇರಿಯ ಮುಂಭಾಗದಲ್ಲಿ ಹೋಗುತ್ತಿದ್ದರು. ಟ್ರಾಫಿಕ್ ಜಾಮ್ ನಲ್ಲಿ ವಾಹನವು ಸಿಲುಕಿದ್ದಾಗ‌ ಕೆಲವು ವ್ಯಕ್ತಿಗಳು ಆತನನ್ನು ಲಾಠಿಯಿಂದ ಬಡಿಯಲು ಪ್ರಾರಂಭಿಸಿದ್ದರು. ದಾಳಿಕೋರರು ‘ನರೇಂದ್ರ ಮೋದಿ ಝಿಂದಾಬಾದ್’, ‘ಬಿಜೆಪಿ ಝಿಂದಾಬಾದ್’ ಎಂಬ ಘೋಷಣೆಗಳನ್ನೂ ಕೂಗುತ್ತಿದ್ದರುವುದು ವೀಡಿಯೋದಲ್ಲಿ ದಾಖಲಾಗಿದೆ.

ರೈತರ ರ‍್ಯಾಲಿಯ ವೇಳೆ ಮಾಜಿ ಶಾಸಕರೊಬ್ಬರು‌ ಬಿ.ಜೆ.ಪಿಯ ದಾಳಿಗೊಳಗಾಗಿದ್ದಾರೆ ಎಂಬುದಾಗಿ ಪಪ್ಪು ಯಾದವ್ ತಿಳಿಸಿದ್ದಾರೆ. “ಮಾಜಿ ಶಾಸಕ ರಾಮ ಚಂದ್ರ ಹಾಗೂ ಇಬ್ಬರು ಯುವ ನಾಯಕರಾದ ವಿಶಾಲ್ ಕುಮಾರ್ ಮತ್ತು  ಮನೀಷ್ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ” ಎಂದು ಜನ ಅಧಿಕಾರ ಪಕ್ಷದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

” ಬಿಹಾರದಲ್ಲಿ ರೈತರು ಬಿ.ಜೆ.ಪಿಯನ್ನು ಹೂಳಲಿದ್ದಾರೆ. ದಾಳಿಯಲ್ಲಿ ನಮಗೆ ನೀಡಿದ ಪ್ರತೀ ಪ್ರಹಾರಕ್ಕೆ ಜನರು ಸೇಡು ತೀರಿಸಿಕೊಳ್ಳಲಿದ್ದಾರೆ” ಎಂಬುದಾಗಿ ಪಪ್ಪು ಹೇಳಿದ್ದಾರೆ.

https://www.facebook.com/PrasthuthaNews/videos/258467745384788/

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!