2021ರ ಹಜ್ ಯಾತ್ರೆಗೆ ಭಾರತದ ತಯಾರಿ ಹೇಗೆ ?

Prasthutha|

ಈ ವರ್ಷದ ಅಕ್ಟೋಬರ್-ನವೆಂಬರ್ ನಿಂದ 2021ರ ಹಜ್ ಯಾತ್ರೆಯ ಅರ್ಜಿಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

- Advertisement -

“ಅಕ್ಟೋಬರ್-ನವೆಂಬರ್ ನಿಂದ 2021ರ ಹಜ್ ಯಾತ್ರೆಯ ಪ್ರಾರಂಭಿಕ ಪ್ರಕ್ರಿಯೆ ಎಂಬಂತೆ ಅರ್ಜಿ ಸಲ್ಲಿಕೆ ಆರಂಭಿಸಲು ನಾವು ಯೋಚಿಸುತ್ತಿದ್ದೇವೆ. ಸೌದಿ ಅರೇಬಿಯಾದ ಮಾರ್ಗಸೂಚಿಗಳಿಗಾಗಿ ನಾವು ಕಾಯುತ್ತಿದ್ದೇವೆ ಮತ್ತು ಮುಂದಿನ ವರ್ಷದ ಹಜ್ ಯಾತ್ರೆ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತದೆ ಎನ್ನುವುದರ ಬಗ್ಗೆ ಆಶಾಭಾವನೆ ಹೊಂದಿದ್ದೇವೆ” ಎಂದು ನಖ್ವಿ ಎಎನ್‌ಐಗೆ ತಿಳಿಸಿದ್ದಾರೆ

ತೀರ್ಥಯಾತ್ರೆಗಾಗಿ ಅರ್ಜಿಗಳ ಸಲ್ಲಿಕೆಗೆ ಸಂಬಂಧಿಸಿದಂತೆ ರಾಜ್ಯ ಹಜ್ ಸಮಿತಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ಪ್ರಾರಂಭವಾಗಿದೆ. “ಈ ಬಾರಿ ಹಜ್ 2021 ನಡೆಯುತ್ತದೆ ಮತ್ತು ಭಾರತೀಯರು ಹಜ್ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಜೀವಿತಾವಧಿಯಲ್ಲಿ ಒಮ್ಮೆ ಹಜ್ ಪ್ರಯಾಣ ಮಾಡುವುದು ಪ್ರತಿಯೊಬ್ಬ ಮುಸ್ಲಿಮರ ಆಶಯವಾಗಿದೆ” ಎಂದು ಸಚಿವರು ಹೇಳಿದರು. COVID-19 ಸಾಂಕ್ರಾಮಿಕ ರೋಗದಿಂದಾಗಿ, ಈ ವರ್ಷದ ಹಜ್ ಯಾತ್ರೆ ನಡೆದಿರಲಿಲ್ಲ.

- Advertisement -

“ಹಜ್ ಯಾತ್ರಾರ್ಥಿಗಳಿಗೆ ಸೇರಿದ ಒಟ್ಟು 2,100 ಕೋಟಿ ರೂ.ಗಳನ್ನು ಒಂದು ತಿಂಗಳೊಳಗೆ ಡಿಬಿಟಿ (ಫಲಾನುಭವಿಗಳಿಗೆ ನೇರ ವರ್ಗಾವಣೆ) ಮೂಲಕ ಹಿಂದಿರುಗಿಸಲಾಗಿದೆ. ಸಾರಿಗೆಗಾಗಿ ಅವರು ವಿಧಿಸುವ ಹಣವನ್ನು ಮರುಪಾವತಿಸುವಂತೆ ನಾವು ಸೌದಿ ಸರ್ಕಾರವನ್ನು ಕೋರಿದ್ದೇವೆ. ಅವರು ನಮ್ಮ ಕೋರಿಕೆಯನ್ನು ಸ್ವೀಕರಿಸಿ ಕಳುಹಿಸಿದ್ದಾರೆ ಸರಿಸುಮಾರು 100 ಕೋಟಿ ರೂ. ಹಣವನ್ನು ಹಜ್ ಸಮಿತಿಯು ಡಿಬಿಟಿ ಮೂಲಕ ಆನ್‌ಲೈನ್ ಮೂಲಕ ಹಿಂದಿರುಗಿಸುವ ಪ್ರಕ್ರಿಯೆಯಾಗಿದೆ “ಎಂದು ನಖ್ವಿ ಹೇಳಿದರು.

Join Whatsapp