ನ್ಯೂಯಾರ್ಕ್: ಗಾಝಾಪಟ್ಟಿಯ ಜನರ ಮೇಲೆ ಅಮಾನವೀಯ ವರ್ತನೆಯನ್ನು ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ. ಗಾಝಾದ ಸಾಮಾನ್ಯ ಜನರ ಮೇಲೆ ಯುದ್ಧ ನಿಲ್ಲಿಸಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಹಮಾಸ್ ಗೂ ಗುಟೆರಸ್ ಕೆಲವು ಸೂಚನೆ ನೀಡಿದ್ದಾರೆ. ಪ್ರಸ್ತುತ ಯುದ್ಧ ಎರಡೂ ಕಡೆಯ ಸಾಮಾನ್ಯ ಜನರ ಮೇಲೆ ಭಾರಿ ಪರಿಣಾಮ ಬೀರಿದೆ.ಇನ್ನು ಇತ್ತೀಚಿನ ಮಾಹಿತಿಗಳ ಪ್ರಕಾರ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 4000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ಜಾಗತಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ವಿಶ್ವಸಂಸ್ಥೆ ಯಾವ ದೇಶ ಅಥವಾ ಸೇನೆಯ ಪರವೂ ನಿಲ್ಲದೆ ಸಾಮಾನ್ಯ ಜನರ ಜೀವ ಉಳಿಸಲು ಮುಂದಾಗಿದ್ದು ಕಂಡುಬಂದಿದೆ.
ಆದರೆ ವಿಶ್ವಸಂಸ್ಥೆಯ ಮಾತನ್ನು ಹಮಾಸ್ ಅಥವಾ ಇಸ್ರೇಲ್ ಸೇನೆ ಕೇಳುತ್ತಾ ಅನ್ನೋ ಪ್ರಶ್ನೆ ಮೂಡಿದೆ.