ನನ್ನನ್ನು ರಾಜಕೀಯವಾಗಿ ಮುಗಿಸಬೇಕೆಂದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ: ಡಿ.ಕೆ ಶಿವಕುಮಾರ್

Prasthutha|

ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದೌರ್ಜನ್ಯ ನಡೆಸಿ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ದೊಡ್ಡವರಿದ್ದಾರೆ, ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಅವರೊಬ್ಬರಿಗೆ ನೋಟಿಸ್ ಕೊಟ್ಟಿಲ್ಲ ಹಾಪ್ ಕಾಮ್ಸ್ ಸಬ್ ರಿಜಿಸ್ಟರ್ ಎಲ್ಲರಿಗೂ ಕೊಟ್ಟಿದೆ. ಸರ್ಕಾರ ಈಗಾಗಲೇ ಕೇಸ್ ವಿತ್ಡ್ರಾ ಮಾಡಿದೆ. ಆದರೂ ಯಾವ ಲೆಕ್ಕಾಚಾರದಲ್ಲಿ ಕೊಟ್ಟಿದ್ದಾರೆ ಗೊತ್ತಿಲ್ಲ. ನನಗೆ ನೊಟೀಸ್ ಬಂದಿಲ್ಲ, ನನ್ನ ಸಂಸ್ಥೆಗೆ ಬಂದಿದೆ. ಹೆಂಡತಿ, ಮಕ್ಕಳ ವಿಚಾರಕ್ಕೆಲ್ಲಾ ಬಂದಿದೆ. ಆಮೇಲೆ ವೈಯಕ್ತಿಕವಾಗಿ ನನ್ನ ಬಳಿ ಬರುತ್ತಾರೆ. ಅವರಿಗೆ ಒಳಗೆ ಹಾಕುವ ಆಸಕ್ತಿ ಇದ್ದರೆ ಹಾಕಿಕೊಳ್ಳಲಿ ಎಂದರು.

Join Whatsapp