ಸಮಾಜದ ಸ್ವಾಸ್ಥ್ಯ ಕೆಡಿಸುವ ಈಶ್ವರಪ್ಪರನ್ನು ಬಂಧಿಸಿ: ವೆಲ್ ಫೇರ್ ಪಾರ್ಟಿ

Prasthutha|

ಬೆಂಗಳೂರು: ಮುಸ್ಲಿಮರ ವಿರುದ್ದ ಕೊಳಕು ನಾಲಗೆ ಹರಿಬಿಟ್ಟು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಈಶ್ವರಪ್ಪರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಸರಕಾರವನ್ನು ಆಗ್ರಹಿಸಿದ್ದಾರೆ. ‌
ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಈಶ್ವರಪ್ಪ ಮುಸ್ಲಿಮರ ವಿರುದ್ಧ ಕೊಳಕುನಾಲಿಗೆ ಹೊರಚಾಚಿ ಹರಿಯಬಿಟ್ಟು ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ಲಂಗುಲಗಾಮಿಲ್ಲದೆ ಮಾತನಾಡುತ್ತಿರುವ ಈಶ್ವರಪ್ಪರ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಲು ಸರಕಾರ ಮುಂದಾಗಬೇಕು ಎಂದು ಅವರು ಹೇಳಿದ್ದಾರೆ.

- Advertisement -

ಮಸೀದಿ ಒಡೆದು ಪುಡಿ ಮಾಡುತ್ತೇವೆ ಎಂದು ಬಹಿರಂಗವಾಗಿ ಸರ್ಕಾರಕ್ಕೆ ಅವಾಝ್ ನೀಡಿ ಮುಸಲ್ಮಾನ ಸಮುದಾಯವನ್ನು ಕೆಣಕುವ ಹುನ್ನಾರ ಮಾಡಿದ್ದಾರೆ. ಬಿಜೆಪಿ ಲೋಕಸಭಾ ಚುನಾವಣಾ ಸಿದ್ಧತೆಯಲ್ಲಿ ಇಂತಹ ಕೋಮು ಪ್ರಚೋದಕ ಮಾತುಗಳನ್ನೇ ಅಸ್ತ್ರ ಮಾಡಿಕೊಳ್ಳುವ ಸೂಚನೆ ದಟ್ಟವಾಗಿದೆ. ಪ್ರಭಾಕರ್ ಭಟ್ ಮೂಲಕ ಅದಕ್ಕೆ ಚಾಲನೆ ನೀಡಿ ಅದನ್ನು ಈಶ್ವರಪ್ಪ ಮುಂದುವರಿಸುತ್ತಿದ್ದಾರೆ ಎಂದು ತಾಹೇರ್ ಹುಸೈನ್ ಆತಂಕ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ನಂಬಿಕೆಗೆ ವಿಶ್ವಾಸಕ್ಕೆ ಘಾಸಿಯುಂಟು ಮಾಡಿ ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರವಿದು ಎಂದ ತಾಹೇರ್ ಹುಸೈನ್, ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಈ ಸರಣಿ ಮುಂದುವರಿಯಲಿದೆ. ಆದ್ದರಿಂದ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು ಸರಕಾರವನ್ನು ಆಗ್ರಹಿಸಿದ್ದಾರೆ

- Advertisement -

ರಾಮನ ಹೆಸರು ಹೇಳಿ ರಾಕ್ಷಸೀಯ ಮುಖ ಪ್ರದರ್ಶಿಸುವ ಮೂಲಕ ಈಶ್ವರಪ್ಪ ವರಿಷ್ಟರ ಕೃಪೆ ಗಿಟ್ಟಿಸಲು ಹವಣಿಸುತ್ತಿದ್ದಾರೆ. ಈಗಾಗಲೇ ಮೂಲೆಗುಂಪಾಗಿರುವ ಈಶ್ವರಪ್ಪರ ಬಳಿ ಕೊಳಕು ನಾಲಿಗೆ ಮಾತ್ರ ಅಸ್ತ್ರ ವಾಗಿದೆ. ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅದನ್ನು ಪ್ರಯೋಗಿಸುತ್ತಿದ್ದಾರೆ. ಇವರನ್ನು ಬಂಧಿಸಿ ಈ ರಾಜ್ಯದ ಜನರ ಹಿತ ನೆಮ್ಮದಿ ಯನ್ನು ಕಾಪಾಡಲು ಸರಕಾರ ಬದ್ದವಾಗಬೇಕು. ಸರಕಾರ ಇಂಥ ಘಟನೆಗಳಿಗೆ ಗಂಭೀರವಾಗಿ ಪರಿಗಣಿಸದೆ ಇರವುದರಿಂದ ಇಂಥ ಸಮಾಜ ಘಾತಕ ಶಕ್ತಿ ಗಳಿಗೆ ಧ್ಯರ್ಯ ಸಿಗುತ್ತಿದೆ.ರಾಜಕೀಯ ಲೆಕ್ಕಚಾರ ಬಿಟ್ಟು ಸರಕಾರ ಸಮಾಜದ ಹಿತದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಬೇಕೆಂದು ವೆಲ್ಫೇರ್ ಅಧ್ಯಕ್ಷರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Join Whatsapp