ಭೀಮಾ ಕೋರೇಗಾಂವ್ ಪ್ರಕರಣ | ವಿಚಾರಣೆಗೆ ಹಾಜರಾಗಲು ಪ್ರೊ. ಪಾರ್ಥೋಸಾರಥಿ ರಾಯ್ ಗೆ ಎನ್ ಐಎ ನೋಟಿಸ್

Prasthutha|

ಮುಂಬೈ : 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಕತ್ತಾದ IISERನ ಪ್ರೊ. ಪಾರ್ಥೋಸಾರಥಿ ರಾಯ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ನೋಟಿಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಯಾಗಿದ್ದಾರೆಂಬ ಆರೋಪದಲ್ಲಿ ರಾಯ್ ಅವರನ್ನು ಸೆ.10ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

- Advertisement -

ಆದರೆ, ಈ ಬಗ್ಗೆ ಮಾತನಾಡಿರುವ ರಾಯ್, “ಆ ಘಟನೆಯ ಬಗ್ಗೆ ನನಗೇನೂ ಗೊತ್ತಿಲ್ಲ. ತನಿಖಾ ಸಂಸ್ಥೆ ಇತರ ಪ್ರಗತಿಪರರ ಜೊತೆಗೆ ನನಗೂ ಹಿಂಸೆ ನೀಡಲು ಪ್ರಯತ್ನಿಸುತ್ತಿದೆ’’ ಎಂದು ಆರೋಪಿಸಿದ್ದಾರೆ. “ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ. ನಾನು ಪುಣೆಯ ಭೀಮಾಕೋರೆಗಾಂವ್ ಸಂಸ್ಮರಣಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಆದರೂ ನನಗೆ ನೋಟಿಸ್ ಜಾರಿ ಮಾಡಲಾಗಿದೆ’’ ಎಂದು ಅವರು ಹೇಳಿದ್ದಾರೆ.

ಪತ್ರಿಕೆಗಳಲ್ಲಿ ಸುದ್ದಿ ಓದುವುದಕ್ಕೂ ಮೊದಲು ಭೀಮಾ ಕೋರೆಗಾಂವ್ ಎಲ್ಲಿದೆ ಎಂಬುದೂ ನನಗೆ ಗೊತ್ತಿರಲಿಲ್ಲ. ಆದರೆ, ಕಿರುಕುಳದ ಕೈದಿಗಳ ಐಕ್ಯ ಸಮಿತಿಯ ಪಶ್ಚಿಮ ಬಂಗಾಳ ಘಟಕದ ಸಂಚಾಲಕನೆಂಬ ಕಾರಣಕ್ಕೆ ಪುಣೆಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಫೋಟೊ ಕೃಪೆ : Gowri Lankesh News

Join Whatsapp