ಮುಂಬೈ ಪಾಕಿಸ್ತಾನದ ಭಾಗವೆಂದ ನಟಿ ಕಂಗನಾಗೆ ಬಿಜೆಪಿ ಸರ್ಕಾರದಿಂದ ‘ವೈ ಪ್ಲಸ್’ ಭದ್ರತೆ !

Prasthutha|

ಆತ್ಮಹತ್ಯೆಗೈದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ ಪೂತ್ ಗೆ ಬೆಂಬಲವಾಗಿ ನಿಲ್ಲುವ ನೆಪದಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿವಸೇನೆ ನೇತೃತ್ವದ ಮೈತ್ರಿ ಸರಕಾರವನ್ನು ಅನಗತ್ಯವಾಗಿ ನಿರಂತರ ಟೀಕಿಸುತ್ತಿದ್ದ ವಿವಾದಾತ್ಮಕ ನಟಿ ಕಂಗನಾ ರಾಣಾವತ್ ಗೆ ಕೇಂದ್ರದ ಬಿಜೆಪಿ ಸರ್ಕಾರ ‘ವೈ ಪ್ಲಸ್’ ಭದ್ರತೆ ಕಲ್ಪಿಸಿದೆ.

- Advertisement -

ಈ ನಟಿ ಇತ್ತೀಚೆಗೆ “ಮುಂಬೈ ಪಾಕಿಸ್ತಾನ ಅಕ್ರಮಿತ ಕಾಶ್ಮೀರದ ಭಾಗ” ಎಂಬರ್ಥದ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದುದು ಇಲ್ಲಿ ಗಮನಾರ್ಹ.
ಇತ್ತೀಚೆಗೆ ಶಿವಸೇನೆಯ ಸಂಸದ ಸಂಜಯ್ ರಾವತ್ ರೊಂದಿಗೆ ಟ್ವಿಟ್ಟರ್ ವಾಗ್ವಾದದ ಸಂದರ್ಭದಲ್ಲಿ ಮುಂಬೈಯನ್ನು ಪಾಕಿಸ್ತಾನ ಅಕ್ರಮಿತ ಕಾಶ್ಮೀರದ ಭಾಗಕ್ಕೆ ಹೋಲಿಸಿದ್ದರು. ಇದು ಮುಂಬೈಗರ ಕೆಂಗಣ್ಣಿಗೆ ಗುರಿಯಾಗಿತ್ತು. “ಸೆಪ್ಟಂಬರ್ 9ರಂದು ನಾನು ಮುಂಬೈಗೆ ಬರುತ್ತಿದ್ದೇನೆ, ನನ್ನನ್ನು ತಡೆಯುವವರು ತಡೆಯಿರಿ” ಎಂದು ಸವಾಲು ಹಾಕಿದ್ದರು.

ಇದೀಗ ಈಕೆಯ ಈ ಎಲ್ಲಾ ಅವಾಂತರಗಳಿಗೆ ಬಿಜೆಪಿಯ ಕುಮ್ಮಕ್ಕಿದೆ ಎಂಬ ಜನರ ಸಂದೇಹಗಳಿಗೆ ಪುಷ್ಟಿ ನೀಡುವಂತೆ ಬಿಜೆಪಿ ಸರ್ಕಾರ ಈಕೆಗೆ ‘ವೈ ಪ್ಲಸ್’ ಭದ್ರತೆ ಕಲ್ಪಿಸಿದೆ. ನಟಿಯನ್ನು ಬಿಜೆಪಿ ತನ್ನ ರಾಜಕೀಯದ ಲಾಭದ ದಾಳವನ್ನಾಗಿಸಿದೆ ಎಂಬ ಹಲವರ ಆರೋಪಗಳಿಗೆ ಇದೀಗ ಬಲ ಬಂದಂತಾಗಿದೆ.
ದೇಶದ ಒಂದು ನಗರವನ್ನು ಪಾಕ್ ಅಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ನಟಿಯೋರ್ವಳಿಗೆ ಉನ್ನತ ಮಟ್ಟದ ಭದ್ರತೆಯನ್ನು ಬಿಜೆಪಿ ಸರ್ಕಾರವೇ ನೀಡುತ್ತಿರುವುದು ಬಿಜೆಪಿಯ ದೇಶಪ್ರೇಮದ ವ್ಯಾಖ್ಯಾನದ ಕುರಿತಾಗಿನ ದ್ವಂದ್ವ ಮತ್ತೊಮ್ಮೆ ಬಯಲಾಗಿದೆ.

- Advertisement -

Join Whatsapp