ಭಾರತ ಮಾತೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಯಿತು: ಮೋದಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಟೀಕೆ

Prasthutha|

►ಕತಾರ್ ಎದುರು ಸಾಷ್ಟಾಂಗ ನಮಸ್ಕಾರ ಮಾಡ ಬೇಕಾಯಿತು

- Advertisement -

ನವದೆಹಲಿ: ಭಾರತದ ವಿದೇಶಾಂಗ ನೀತಿಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ಕಟುವಾಗಿ ಟೀಕಿಸಿದ್ದಾರೆ.

‘ಮೋದಿ ಸರ್ಕಾರದ 8 ವರ್ಷಗಳ ಅವಧಿಯಲ್ಲಿ, ಭಾರತ ಮಾತೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಯಿತು. ಏಕೆಂದರೆ ನಾವು ಲಡಾಖ್ ನಲ್ಲಿ ಚೀನಿಯರ ಮುಂದೆ ತೆವಳಿ ನಡೆಯಬೇಕಾಯಿತು, ರಷ್ಯನ್ನರ ಮುಂದೆ ಮಂಡಿಯೂರಬೇಕಾಯಿತು, ಕ್ವಾಡ್ ಸಭೆಯಲ್ಲಿ ಅಮೆರಿಕನ್ನರ ಮುಂದೆ ‘ಮಿಯಾಂವ್’ ಎನ್ನಬೇಕಾಯಿತು. ಆದರೆ ನಾವು ಈಗ ಚಿಕ್ಕ ರಾಷ್ಟ್ರ ಕತಾರ್ ಎದುರು ಸಾಷ್ಟಾಂಗ ನಮಸ್ಕಾರ ಮಾಡಿದ್ದೇವೆ. ಇದು ನಮ್ಮ ವಿದೇಶಾಂಗ ನೀತಿಯ ಅಧಃಪತನವಾಗಿದೆ’ ಎಂದು ಅವರು ಟ್ವಿಟರ್ ನಲ್ಲಿ ದೂರಿದರು.

- Advertisement -

ಪ್ರವಾದಿ ಮುಹಮ್ಮದ್ ವಿರುದ್ಧದ ಬಿಜೆಪಿ ನಾಯಕರ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಕತಾರ್, ಕುವೈತ್, ಇರಾನ್ ಆಡಳಿತವು ಭಾರತೀಯ ರಾಯಭಾರಿಗಳಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದ್ದು ಅರಬ್ ರಾಷ್ಟ್ರಗಳು ಭಾರತದೊಂದಿಗೆ ಸೆಣಸಾಟಕ್ಕೆ ಸಿದ್ಧವಾಗುತ್ತಿದೆಯೋ ಎಂಬ ವಿಷಯ ಚರ್ಚೆಯಾಗುತ್ತಿದೆ. ಅದೇ ವೇಳೆ ಭಾರತದ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂಬ ಅಭಿಯಾನವೂ ಆ ದೇಶಗಳಲ್ಲಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಇಲಾಖೆಯು ಎರಡೂ ದೇಶಗಳಿಗೆ ಸ್ಪಷ್ಟನೆ ನೀಡಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರನ್ನು ಅಮಾನತುಗೊಳಿಸಿದೆ.

Join Whatsapp