ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ಸದಾ ತೆರೆದಿರುತ್ತದೆ: ಆದಿತ್ಯ ಠಾಕ್ರೆ

Prasthutha|

ಮುಂಬೈ:  ಜಮ್ಮು ಕಾಶ್ಮೀರದ ಪರಿಸ್ಥಿತಿ ಸಾಕಷ್ಟು ಅಸ್ಥಿರವಾಗಿದ್ದು, ಅಲ್ಲಿನ ಕಾಶ್ಮೀರಿ ಪಂಡಿತರು ತುಂಬಾ ನೋವು ಅನುಭವಿಸಿತ್ತಿದ್ದಾರೆ. ನಾವು ಕಾಶ್ಮೀರಿ ಪಂಡಿತರನ್ನು ಬೆಂಬಲಿಸುತ್ತೇವೆ.  ಅವರಿಗೆ ನಮ್ಮ ರಾಜ್ಯದ ಬಾಗಿಲು ಸದಾ ತೆರೆದಿರುತ್ತದೆ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.

- Advertisement -

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಶ್ಮೀರದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಅಲ್ಲಿನ ಪಂಡಿತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.

ಈ ಮಧ್ಯೆ ಕಾಶ್ಮೀರದ ವಿಚಾರವಾಗಿ ಬಿಜೆಪಿಯನ್ನು ಟೀಕೆ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “1990 ರ ಯುಗ ಮತ್ತೆ ಬಂದಿದೆ. ಅವರ ಬಳಿ ಯಾವುದೇ ಯೋಜನೆಗಳಿಲ್ಲ. ಕಣಿವೆಯಲ್ಲಿ ಕೊಲೆಯಾದಾಗಲೆಲ್ಲ ಗೃಹ ಸಚಿವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ ಎಂಬ ಸುದ್ದಿ ಬರುತ್ತದೆ. ಈ ಸಭೆಗಳು ಸಾಕು, ಈಗ ನಮಗೆ ಕ್ರಮ ಬೇಕು” ಎಂದು ಕಿಡಿಕಾರಿದ್ದಾರೆ.

Join Whatsapp