ಮಂಗಳೂರಿನಲ್ಲಿ ಬಂದ್ ಇಲ್ಲ | ಸಹಜ ಸ್ಥಿತಿಯಲ್ಲಿದೆ ಕರಾವಳಿ ಜನರ ದೈನಂದಿನ ಚಟುವಟಿಕೆ

Prasthutha|

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ದೇಶಾದ್ಯಂತ ರೈತರು ಬೀದಿಗಿಳಿದಿರುವ ನಡುವೆ, ಇಂದು ಕರೆ ನೀಡಲಾಗಿದ್ದ ಭಾರತ ಬಂದ್ ಗೆ ಮಂಗಳೂರಿನಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜಿಲ್ಲೆಯಲ್ಲಿ ಜನಜೀವನ ಎಂದಿನಂತಿದ್ದು, ವಾಹನ ಸಂಚಾರ ಎಂದಿನಂತೆ ಇರುವುದರಿಂದ ಜನರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಬೆಳಗ್ಗಿನಿಂದಲೇ ಕೆಎಸ್ ಆರ್ ಟಿಸಿ, ಸಿಟಿ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ಓಡಾಡುತ್ತಿವೆ. ಆಟೊ ರಿಕ್ಷಾಗಳ ಓಡಾಟವೂ ಇದ್ದು, ಹೋಟೆಲ್, ಅಂಗಡಿಗಳೂ ತೆರೆಯಲ್ಪಟ್ಟಿವೆ.

- Advertisement -

ಆದರೆ, ಬೆಳಗ್ಗೆ 10 ಗಂಟೆಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ನಂತೂರು ಸರ್ಕಲ್ ನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.  

- Advertisement -