ವಾಷಿಂಗ್ಟನ್ : ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅಮೆರಿಕದ ಕೆಲವು ಸಂಸದರು ಬೆಂಬಲ ಸೂಚಿಸಿದ್ದಾರೆ. ರೈತರಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಮೋದಿ ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತಿದ್ದರೂ, ಭಾರತದ ಮಾಧ್ಯಮಗಳು ಮಾತ್ರ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಕ್ರಮವನ್ನು ಸಮರ್ಥಿಸುತ್ತಿರುವುದಲ್ಲದೆ, ಬಿಜೆಪಿ ಬೆಂಬಲಿಗರೂ ರೈತರನ್ನು ಹೀಯಾಳಿಸುತ್ತಿರುವುದೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ.
“ತಮ್ಮ ಜೀವನಕ್ಕಾಗಿ ಭಾರತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ನಾನು ಅವರ ಪರವಾಗಿ ನಿಲ್ಲುತ್ತೇನೆ’’ ಎಂದು ಅಮೆರಿಕ ಸಂಸದ ಡೌಗ್ ಲಾಮಾಲ್ಫಾ ಹೇಳಿದ್ದಾರೆ.
ಡೆಮಾಕ್ರಟಿಕ್ ಸಂಸದ ಜೋಶ್ ಹರ್ದರ್, ಸಂಸದ ಟಿ.ಜೆ. ಕಾಕ್ಸ್, ಸಂಸದ ಆಂಡಿ ಲೆವಿನ್ ಸೇರಿದಂತೆ ಹಲವು ಸಂಸದರು ತಾವು ಭಾರತದಲ್ಲಿನ ರೈತರ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.