ಅಚ್ಛೇ ದಿನ್! | ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90ರ ಗಡಿ ದಾಟಿತು ; ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದ್ದರೂ ತುಟಿಬಿಚ್ಚದ ಪ್ರತಿಪಕ್ಷಗಳು

Prasthutha|

ನವದೆಹಲಿ : ಒಂದೆಡೆ ದೇಶಾದ್ಯಂತ ರೈತರು ಬೀದಿಗಿಳಿದು ತಮ್ಮ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಪೆಟ್ರೋಲಿಯಂ ಸಂಸ್ಥೆಗಳು ಸದ್ದಿಲ್ಲದೆ, ದಿನ ದಿನ ಪೈಸೆ ಪೈಸೆಯೇ ಬೆಲೆ ಏರಿಕೆ ಮಾಡುತ್ತಾ, ಜನ ಸಾಮಾನ್ಯರ ಮೇಲೆ ಹೊರೆಯಾಗಿಸುತ್ತಿವೆ.

- Advertisement -

ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಒಂದಾದ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90 ರೂ. ಗಡಿ ದಾಟಿದೆ. ಕಳೆದ ಕೆಲವು ದಿನಗಳಿಂದ ಸತತ ಬೆಲೆ ಏರಿಕೆಯಾಗುತ್ತಿದ್ದರೂ, ಪ್ರತಿಪಕ್ಷಗಳೂ ಈ ಬಗ್ಗೆ ಮೌನವಾಗಿವೆ. ಆದರೆ, ಆಡಳಿತಾರೂಢ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಾತ್ರ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ.

ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ.ಗೆ ಮಾರಾಟವಾಗುತ್ತಿದೆ. ಇದು ಜನರ ಮೇಲೆ ಮಾಡುತ್ತಿರುವ ಶೋಷಣೆ, ಪೆಟ್ರೋಲ್ ರಿಫೈನರಿಗಳಲ್ಲಿ ಪ್ರತಿ ಲೀಟರ್ ಬೆಲೆ 30 ರೂ. ಆಗುತ್ತದೆ. ತೆರಿಗೆ ಮತ್ತು ಪೆಟ್ರೋಲ್ ಪಂಪ್ ಗಳ ಕಮಿಶನ್ ನಿಂದಾಗಿ ಉಳಿದ 60 ರೂ. ಹೆಚ್ಚಾಗುತ್ತದೆ. ನನ್ನ ದೃಷ್ಟಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 40 ರೂ.ಗೆ ಮಾರಾಟ ಮಾಡಬಹುದು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಇಂದು ಲೀಟರ್ ಗೆ ಪೆಟ್ರೋಲ್ ಬೆಲೆ 86.51 ರೂ. ಆಗಿದ್ದು, ಡೀಸೆಲ್ ಬೆಲೆ ಲೀಟರ್ ಗೆ 78.31 ರೂ. ಆಗಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90.34 ರೂ., ಡೀಸೆಲ್ ಪ್ರತಿ ಲೀಟರ್ ಗೆ 80.51 ರೂ.ಯಷ್ಟಾಗಿದೆ.

ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ 90 ರೂ. ಗಡಿ ಕೆಲವು ದಿನಗಳ ಹಿಂದೆಯೇ ದಾಟಿದೆ. ಕೆಲವು ನಗರಗಳಲ್ಲಿ ರೂ. 94ರ ಗಡಿ ದಾಟಿ ರೂ.95ರ ಗಡಿ ಸಮೀಪಿಸುತ್ತಿದೆ. ಮಧ್ಯಪ್ರದೇಶದ ರೇವಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 94.40 ರೂ. ಆಗಿದೆ. ಶಾದೋಲ್ ನಲ್ಲಿ ಪ್ರತಿ ಲೀಟರ್ ಗೆ 93.97, ಬಾಲಘಾಟ್ ನಲ್ಲಿ 93.88 ರೂ., ಶಿವೋಪುರದಲ್ಲಿ 93.50 ರೂ., ಸಾತ್ನಾದಲ್ಲಿ 93.38, ಪನ್ನಾದಲ್ಲಿ 93.21 ರೂ.ಯಷ್ಟು ಬೆಲೆ ಏರಿಕೆಯಾಗಿದೆ.  

Join Whatsapp