ಗಾಝಾ ಬಿಟ್ಟು ತೆರಳುವಂತೆ 11 ಲಕ್ಷ ಫೆಲೆಸ್ತೀನೀಯರಿಗೆ ಇಸ್ರೇಲ್ ಆದೇಶ

Prasthutha|

ಜೆರುಸಲೆಂ: 11 ಲಕ್ಷ ಜನರು ವಾಸಿಸುವ ಉತ್ತರ ಗಾಝಾವನ್ನು 24 ಗಂಟೆಗಳಲ್ಲಿ ಸ್ಥಳಾಂತರಿಸುವಂತೆ ಇಸ್ರೇಲ್ ಮಿಲಿಟರಿ ಶುಕ್ರವಾರ ನಿರ್ದೇಶಿಸಿದೆ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

- Advertisement -


ಹಮಾಸ್ ಸುಮಾರು 150 ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿರುವುದರಿಂದ ಅವರನ್ನು ಬಿಡುಗಡೆಗೊಳಿಸುವ ತನಕ ತನ್ನ ದಾಳಿ ನಿಲ್ಲುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲಿ ಮಿಲಿಟರಿ ಅಂತಹ ಮನವಿಯನ್ನು ಇನ್ನೂ ದೃಢಪಡಿಸದಿದ್ದರೂ, ಇದು ಮುಂಬರುವ ನೆಲದ ಆಕ್ರಮಣವನ್ನು ಸೂಚಿಸಬಹುದು. ಸಿದ್ಧತೆ ನಡೆಸುತ್ತಿರುವಾಗ, ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಗುರುವಾರ ಅದು ಹೇಳಿದೆ.

- Advertisement -


ಉತ್ತರ ಗಾಝಾದಿಂದ ತೆರಳುವಂತೆ ಜನರಿಗೆ ಇಸ್ರೇಲ್ ನೀಡಿದ ಸೂಚನೆ ಕುರಿತು ಪ್ರತಿಕ್ರಿಯಿಸಿದ ವಿಶ್ವ ಸಂಸ್ಥೆಯ ವಕ್ತಾರೆ ಸ್ಟೆಫಾನಿ ದುಜರ್ರಿಕ್, ವ್ಯಾಪಕ ಸಾವುನೋವುಗಳಿಲ್ಲದೆ ಈ ಆದೇಶ ಜಾರಿಗೊಳಿಸುವುದು ಅಸಾಧ್ಯ ಎಂದಿದ್ದಾರೆ.

Join Whatsapp