ಇಂದಿನಿಂದ ಬೆಂಗಳೂರು-ಮಂಗಳೂರು ರೈಲು ಸೇವೆ ಪುನಾರಂಭ

Prasthutha|

ಮಂಗಳೂರು : ಬೆಂಗಳೂರು-ಮಂಗಳೂರು ನಡುವೆ ಕರಾವಳಿ ವಿಭಾಗದಲ್ಲಿ ಮೂರು ವಿಶೇಷ ರೈಲುಗಳ ಓಡಾಟಕ್ಕೆ ಇಂದಿನಿಂದ ಅನುಮತಿ ನೀಡಲಾಗಿದೆ. ನೈಋತ್ಯ ರೈಲ್ವೆ ವಿಭಾಗ ಈ ಅನುಮತಿ ನೀಡಿದ್ದು, ಮೂರು ರೈಲುಗಳಲ್ಲಿ ಬೆಂಗಳೂರು-ಮಂಗಳೂರಿನ (06515) ನಡುವೆ ಸಂಚರಿಸುವ ರೈಲು ಇಂದಿನಿಂದ ಕಾರ್ಯಾಚರಣೆ ಆರಂಭಿಸಿದೆ.

- Advertisement -

ಬೆಂಗಳೂರು-ಮಂಗಳೂರು (06515) ರೈಲು ವಾರದಲ್ಲಿ ನಾಲ್ಕು ದಿನಗಳ ಕಾಲ ಪ್ರಯಾಣಿಸಲಿದೆ. ನಾಳೆ (ಸೆ.5)ಯಿಂದ ನ.06518 ರೈಲು ಪ್ರಯಾಣ ಆರಂಭಿಸಲಿದೆ. ಸೆ. 6ರಿಂದ ನಂ. 06516 ರೈಲು ಕಾರ್ಯಾರಂಭಿಸಲಿದೆ. ಇದು ವಾರದಲ್ಲಿ ಮೂರು ದಿನ ಕಾರ್ಯ ನಿವರ್ಹಿಸಲಿದೆ.
ಈ ವಿಶೇಷ ರೈಲುಗಳು ಮುಂದಿನ ಸೂಚನೆ ಬರುವವರೆಗೂ ಕಾರ್ಯ ನಿರ್ವಹಿಸಲಿದ್ದು, ರೈಲುಗಳಲ್ಲಿ ಪ್ರಯಾಣಿಸುವವರಿಗೆ ರೈಲು ನಿಲ್ದಾಣದಲ್ಲಿ ಟಿಕೆಟ್ ಸಿಗುವುದಿಲ್ಲ. ಟಿಕೆಟ್ ಬೇಕಾದವರು ಮುಂಗಡ ಬುಕ್ಕಿಂಗ್ ಮಾಡುವುದು ಅಗತ್ಯವಾಗಿದೆ.

Join Whatsapp