ಸರ್ಕಾರಿ ಬಸ್ ನಲ್ಲಿ ಕೇಸರಿ ಧ್ವಜ: ವಿವಾದವಾಗುತ್ತಿದ್ದಂತೆಯೇ ತೆರವುಗೊಳಿಸಿದ BMTC

Prasthutha|

ಮೈಸೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( BMTC ) ಗೆ ಸೇರಿದ ಸಾರ್ವಜನಿಕ ಬಸ್ಸನ್ನು ಸಂಘಪರಿವಾರ ಅಳವಡಿಸುವ ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ವಿರೋಧ ಮತ್ತು ವಿವಾದವಾಗುತ್ತಿದ್ದಂತೆಯೇ BMTC ಅಧಿಕಾರಿಗಳು ತೆರವುಗೊಳಿಸಿದ್ದಾರೆ.

- Advertisement -

ಸರ್ಕಾರಿ ವಾಹನಗಳನ್ನು ಕೇಸರೀಕರಣಗೊಳಿಸುತ್ತಿರುವ ಬಗ್ಗೆ ಪ್ರಯಾಣಿಕರಲ್ಲೊಬ್ಬರಾದ ಸೈಯ್ಯದ್ ಮೊಯಿನ್, ತನ್ನ ಟ್ವಿಟ್ಟರ್ ನಲ್ಲಿ @BMTC_BENGALURU ಹ್ಯಾಶ್ ಟ್ಯಾಗ್ ಅಡಿಯಲ್ಲಿ ಪೋಸ್ಟ್ ಮಾಡುವ ಮೂಲಕ BMTC ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮಾತ್ರವಲ್ಲ ಸರ್ಕಾರ ವಾಹನಗಳನ್ನು ಕೋಮುವಾದಗೊಳಿಸುವುದರಿಂದ ಸಹ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದರು.

- Advertisement -

ಘಟನೆಯ ಕುರಿತು BMTC ಗೆ ದೂರನ್ನು ನೀಡಿದ ಹಿನ್ನೆಲೆಯಲ್ಲಿ ಧ್ವಜಗಳನ್ನು ತೆರವುಗೊಳಿಸಿದೆ ಮತ್ತು ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು BMTC ಸಂಸ್ಥೆ ತಿಳಿಸಿದೆ.

Join Whatsapp