ಬೆಳ್ತಂಗಡಿ | ಬ್ಯಾನರ್ ಹಾಕುವ ವೇಳೆ ವಿದ್ಯುತ್ ಅವಘಡ, ಓರ್ವ ಮೃತ್ಯು

Prasthutha|

ಬೆಳ್ತಂಗಡಿ : ಬ್ಯಾನರ್ ಹಾಕುವ ವೇಳೆ ವಿದ್ಯುತ್ ಅವಘಡ ಸಂಭವಿಸಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಬೆಳ್ತಂಗಡಿ ಪೇಟೆಯಲ್ಲಿ ನಡೆದಿದೆ.

- Advertisement -

ಮಂಗಳೂರಿನಲ್ಲಿ ಕಾರ್ಮಿಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮವೊಂದರ ಫ್ಲೆಕ್ಸನ್ನು ಹಾಕುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿಯಲ್ಲಿ ವಿದ್ಯುತ್ ಕಂಬವೊಂದರ ತಂತಿಗೆ ಫ್ಲೆಕ್ಸ್ ಕಟ್ಟುವಾಗ ಅದರ ಕಬ್ಬಿಣ ರಾಡ್ ತಾಗಿ ಆಕಸ್ಮಿಕವಾಗಿ ವಿದ್ಯುತ್ ಅವಘಡ ಸಂಭವಿಸಿದೆ. ಈ ಪರಿಣಾಮ ಓರ್ವ ಮೃತ ಪಟ್ಟಿದ್ದಾರೆ. ಇನ್ಮೋರ್ವ ಗಂಭೀರ ಗಾಯಗೊಂಡಿದ್ದಾರೆ.

- Advertisement -

ಖಾಸಗಿ ಪ್ರಿಂಟರ್ಸ್ ಗಳ ಕಾಂಟ್ರಾಕ್ಟರ್ ಮೇರೆಗೆ ಕೆಲಸವದರಿಬ್ಬರು ಫ್ಲೆಕ್ಸ್ ಹಾಕಿತ್ತಿದ್ದರು. ಈ ವೇಳೆ ವಿದ್ಯುತ್ ತಗುಲಿದೆ. ಇಬ್ಬರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಒಬ್ಬ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Join Whatsapp