ತಮಿಳುನಾಡು | ಬಹಿರಂಗವಾಗಿ ಮನುಸ್ಮೃತಿಯ ಕಿರುಪುಸ್ತಕವನ್ನು ಹಂಚುತ್ತಿರುವ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು

Prasthutha|

ಚೆನ್ನೈ: ವ್ಯಾಪಕ ವಿರೋಧಾಭಾಸವಿರುವ ಹಿಂದುತ್ವ ಅಜೆಂಡಾದ ಮನುಸ್ಮೃತಿಯ ಕಿರುಪುಸ್ತಕವನ್ನು ತಮಿಳುನಾಡಿನಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಬಹಿರಂಗವಾಗಿ ಹಂಚುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ತಮಿಳುನಾಡಿನಾದ್ಯಂತ ಮನುಸ್ಮೃತಿ ಮತ್ತು ಇತರ ಹಿಂದೂ ಧಾರ್ಮಿಕ ಪಠ್ಯಗಳ ಆಯ್ದ ಶ್ಲೋಕಗಳನ್ನು ಒಳಗೊಂಡಿರುವ ಕಿರುಪುಸ್ತಕಗಳನ್ನು ವಿತರಿಸುವ ಮೂಲಕ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಎಂಬ ರಾಜಕೀಯ ಪಕ್ಷವೊಂದು ಅಭಿಯಾನವನ್ನು ಪ್ರಾರಂಭಿಸಿದೆ.

‘ವಿಸಿಕೆ’ ಪಕ್ಷವು ಪ್ರಕಟಿಸಿದ 32 ಪುಟಗಳ ಕಿರುಪುಸ್ತಕವು ಮನುಸ್ಮೃತಿ ಏಕೆ ಓದಬೇಕು? ಎಂಬುದನ್ನು ವಿವರಿಸುವ ಮುನ್ನುಡಿಯನ್ನೂ ಹೊಂದಿದೆ. ಮನುಸ್ಮೃತಿಯ ಮೇಲೆ ಹಿಂದೂ ಸಮಾಜದ ತಳಹದಿ ನಿರ್ಮಾಣವಾಗಿದೆ ಎಂದು ಆ ಮುನ್ನುಡಿಯಲ್ಲಿ ವ್ಯಕ್ತಪಡಿಸಲಾಗಿದೆ.

- Advertisement -

“ಕ್ರಾಂತಿಕಾರಿ ನಾಯಕ ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನವನ್ನು ಜನವರಿ 26, 1950 ರಂದು ಅಂಗೀಕರಿಸಿದ ನಂತರವೂ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೊರತುಪಡಿಸಿ, ಮನುವಿನ ಕಾನೂನುಗಳು ಆಡಳಿತ ಕಾನೂನುಗಳಾಗಿ ಕಾರ್ಯನಿರ್ವಹಿಸುತ್ತವೆ” ಎಂದು ಮುನ್ನುಡಿ ಹೇಳುತ್ತದೆ.

ರಾಜಕೀಯ ಕ್ಷೇತ್ರದಲ್ಲಿಯೂ ಸಹ ಮನುಸ್ಮೃತಿಯ ಪರಿಣಾಮವನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸಬಹುದು ಮತ್ತು ಕಾಣಬಹುದು ಎಂದೂ ಅದರಲ್ಲಿ ಉಲ್ಲೇಖಿಸಿದ್ದಾರೆ.

Join Whatsapp