ಬೆಳ್ತಂಗಡಿ: ಟ್ರಾನ್ಸ್ ಫಾರ್ಮರ್ ಗೆ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಸ್ಪರ್ಶ: BMS ಕಾರ್ಯಕರ್ತ ಸಾವು, ಮತ್ತೋರ್ವ ಗಂಭೀರ

Prasthutha|

ಬೆಳ್ತಂಗಡಿ: ವಿದ್ಯುತ್ ಟ್ರಾನ್ಸ್ ಫರ್ಮರ್ ಗೆ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು ಬಿಜೆಪಿಯ ಅಂಗ ಸಂಸ್ಥೆಯಾದ ಭಾರತೀಯ ಮಜದೂರ್ ಸಂಘದ ಸದಸ್ಯನೋರ್ವ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಬೆಳ್ತಂಗಡಿಯಲ್ಲಿಂದು ನಡೆದಿದೆ.

- Advertisement -

ಭಾರತೀಯ ಮಜದೂರ್ ಸಂಘದ ಸದಸ್ಯ ಸುದೇಮುಗೇರು ನಿವಾಸಿ ಪ್ರಶಾಂತ್ (38) ಮೃತಪಟ್ಟವರು. ಅದೇ ಗ್ರಾಮದ ಸತೀಶ್ (25) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾರತೀಯ ಮಜದೂರ್ ಸಂಘ ನವೆಂಬರ್ 13ರಂದು ಮಂಗಳೂರಿನ ಮಣ್ಣಗುಡ್ಡೆಯ ಸಂಘ ನಿಕೇತನದಲ್ಲಿ ಕುಟುಂಬ ಮಿಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಬ್ಯಾನರನ್ನು ಸಂಘದ ಪದಾಧಿಕಾರಿಗಳ ಸೂಚನೆಯ ಮೇರೆಗೆ ಪ್ರಶಾಂತ್ ಮತ್ತು ಸತೀಶ್ ಬೆಳ್ತಂಗಡಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ವಶಿಷ್ಠ ಎಲೆಕ್ಟ್ರಿಕ್ ಅಂಗಡಿಯ ಬಳಿಯ ಟ್ರಾನ್ಸ್ ಫರ್ ಮರ್ ಗೆ ಇಂದು ಸಂಜೆ 7 ಗಂಟೆ ಸುಮಾರಿಗೆ ಕಟ್ಟುತ್ತಿದ್ದರು. ಈ ವೇಳೆ ಫ್ಲೆಕ್ಸಿನ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ಸ್ಪರ್ಶ ಗೊಂಡಿದೆ. ಆಗ ಅವರಿಬ್ಬರ ಮೇಲೆ ವಿದ್ಯುತ್ ಹರಿದಿದೆ . ಪರಿಣಾಮ ಸುಮಾರು ಹತ್ತು ಅಡಿಗಳಷ್ಟು ದೂರ ಅವರಿಬ್ಬರು ಎಸೆಯಲ್ಪಟ್ಟಿದ್ದಾರೆ.

- Advertisement -

ಈ ವೇಳೆ ಪ್ರಶಾಂತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡು ಬಿದ್ದಿದ್ದ ಸತೀಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಶಾಂತ್ ಅವರು ಆಟೋರಿಕ್ಷಾ ಚಾಲಕರಾಗಿದ್ದು ಬಿಎಮ್ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಶಾಂತ್ ಸಾವಿಗೆ ಬಿಎಂಎಸ್ ಸಂಘಟನೆಯ ಪದಾಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ವಸಂತ ಬಂಗೇರ, ರಕ್ಷಿತ್ ಶಿವರಾಂ ಸೇರಿದಂತೆ ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳಯವಿನ ಆರೋಗ್ಯ ವಿಚಾರಿಸಿದ್ದಾರೆ.

Join Whatsapp