ವಿಧಾನಸೌಧದ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ !

Prasthutha|

ಬೆಂಗಳೂರು: ವಿಧಾನಸೌಧದ ಎರಡನೇ ಮಹಡಿಯ 208 ನೇ ಕೊಠಡಿ ಬಳಿ ಬಿಯರ್ ಬಾಟಲ್ ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ.
ವಿಧಾನ ಸೌಧದೊಳಗೆ ಮದ್ಯಪಾನ ಮಾಡಿದವರು ಯಾರು ಅನ್ನುವ ಪ್ರಶ್ನೆ ಉದ್ಭವವಾಗಿದೆ. ಸದ್ಯ ಬಿಯರ್ ಬಾಟಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಆರಂಭಗೊಂಡಿದ್ದು, ಇದೇ ಸಂದರ್ಭದಲ್ಲಿ ವಿಧಾನಸೌಧದ ಎರಡನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆಯಾಗಿದೆ. ವಿಧಾನಸೌಧದ ಎಲ್ಲ ಕಡೆ ಸಿಸಿ ಕ್ಯಾಮರಾ ಕೂಡಾ ಇದೆ. ವಿಧಾನಸೌಧದ ಒಳಗಡೆ ಹೋಗಬೇಕಾದರೂ ತಪಾಸಣೆ ಮಾಡಲಾಗುತ್ತದೆ. ಹೀಗಿದ್ದರೂ ಶಕ್ತಿ ಸೌಧದಲ್ಲಿ ಬಿಯರ್ ಬಾಟಲ್ ಪತ್ತೆಯಾಗಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ.

- Advertisement -