ಹೊಸದಿಲ್ಲಿ: ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಗುರುವಾರ ಸಂಸತ್ ನಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಆಡಿದ ಮಾತುಗಳು ಪೂರಕವಾಗಿವೆ.
ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ವಿಧೇಯಕ ವಿರೋಧಿಸಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ವಿಪಕ್ಷ ನಾಯಕರು ಸೈಲೆಂಟಾಗಿ ಇರದಿದ್ರೆ ಅವರ ಮನೆಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬರುತ್ತಾರೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಮೀನಾಕ್ಷಿ ಲೇಖಿಯ ಮಾತುಗಳು ರಾಷ್ಟ್ರ ರಾಜಕೀಯದಲ್ಲೀಗ ಸಂಚಲನ ಮೂಡಿಸಿವೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದೆ ಎಂಬ ನಮ್ಮ ಮಾತು ನಿಜ ಎಂದು ಕೇಂದ್ರ ಸಚಿವರೇ ಈಗ ಒಪ್ಕೊಂಡಿದ್ದಾರೆ. ಆವೇಶದಲ್ಲಿ ಮೀನಾಕ್ಷಿ ಲೇಖಿ ವಿಪಕ್ಷಗಳನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಎನ್‍ಸಿಪಿ ಹೇಳಿದೆ.
ಈ ಸಂಬಂಧ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಟ್ವೀಟ್ ಮಾಡಿ, ಇದು ಎಚ್ಚರಿಕೆನಾ? ಬೆದರಿಕೆನಾ ಎಂದು ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ಸೇರಿ ಹಲವು ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.