ನಾಳೆ ನಿವೃತ್ತಿ ಹೊಂದಲಿರುವ ಬಿಡಿಎ ಗಾರ್ಡನರ್ ಇಂದು‌ ಸಸ್ಪೆಂಡ್ : ಶಿವಸಿಂಗಯ್ಯನಿಗೆ ಮುಳುವಾಯ್ತು ವೈರಲ್ ಬ್ಯಾನರ್

Prasthutha|

ಬೆಂಗಳೂರು: ನಾಳೆ ನಿವೃತ್ತಿ ಹೊಂದಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಉಪ ವ್ಯವಸ್ಥೆಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಾರ್ಡಗರ್ ಶಿವಲಿಂಗಯ್ಯ , ಕಮಿಷನರ್ ರಾಜೇಶ್ ಗೌಡ ಅವರ ಆದೇಶದ ಮೇರೆಗೆ ಇಂದು ಅಮಾನತು ಮಾಡಲಾಗಿದೆ.

- Advertisement -

ಇತ್ತೀಚೆಗೆ ನಡೆದ ಎಸಿಬಿ ದಾಳಿಯಲ್ಲಿ ಶಿವಲಿಂಗಯ್ಯ ಶೇ.397ಕ್ಕೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಅಮಾನತು ಮಾಡಲಾಗಿದೆ. ಆದರೆ ನಾಳೆ ನಿವೃತ್ತಿ ಹೊಂದಲಿರುವ ಶಿವಲಿಂಗಯ್ಯ ಸೆಂಡ್ ಆಫ್ ಗೆ ಭರ್ಜರಿ ತಯಾರಿ ನಡೆದಿದ್ದು, ಶಿವಲಿಂಗಯ್ಯ ಆಪ್ತ ಬಳಗದಿಂದ ಬ್ಯಾನರ್ ಗಳನ್ನು ಅಳವಡಿಸಲು ಸಿದ್ದತೆ ನಡೆದಿತ್ತು ಎನ್ನಲಾಗಿದೆ.

ಶಿವಲಿಂಗಯ್ಯ ಕಾರ್ಯವೈಖರಿಯನ್ನು ಹಾಡಿಹೂಗಳಿರುವ ಬ್ಯಾನರ್ ವಾಟ್ಸ್ ಅಪ್ ನಲ್ಲಿ ವೈರಲ್ ಆಗ್ತಾ ಇದ್ದು ಆ ಕಾರಣವೇ ನಾಳೆ ನಿವೃತ್ತಿ ಆಗಬೇಕಿದ್ದ ಶಿವಲಿಂಗಯ್ಯ ಇಂದು ಸಸ್ಪೆಂಡ್ ಆಗಿದ್ದಾರೆ.



Join Whatsapp