ಶಾಲಾ ಮಕ್ಕಳಿಗೆ ಸೂಕ್ತ ಸೌಲಭ್ಯ ಒದಗಿಸದ ಸರ್ಕಾರ ಜಾಹೀರಾತುಗಳಿಗೆ ಕೋಟಿಗಟ್ಟಲೆ ಸುರಿಯುತ್ತಿದೆ: SDPI

Prasthutha|

ಬೆಂಗಳೂರು: ಶಾಲಾ ಮಕ್ಕಳಿಗೆ ಸೂಕ್ತ ಸೌಲಭ್ಯ ನೀಡದ ಸರ್ಕಾರ ಜನರ ಮುಂದೆ ಸುಳ್ಳು ಹೇಳಲು ಜಾಹೀರಾತುಗಳಿಗೆ ಕೋಟಿ, ಕೋಟಿ ಸುರಿಯುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ B.R.ಭಾಸ್ಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಶಾಲಾ ಮಕ್ಕಳಿಗೆ ಸೈಕಲ್, ಶೂ, ಸಾಕ್ಸ್ ಕೊಡದೆ ಮೂರು ವರ್ಷವಾಯಿತು. ಅದು ಬಿಡಿ, ಕನಿಷ್ಠ ಚಾಕ್ಪೀಸ್ ಇಲ್ಲದೆ ಶಿಕ್ಷಕರು ಪರದಾಡುತ್ತಿದ್ದಾರೆ. ಆದರೆ ಜನರಿಗೆ ಸುಳ್ಳು ಹೇಳಲು ಜಾಹೀರಾತುಗಳಿಗೆ ಕೋಟಿ, ಕೋಟಿ ಸುರಿಯುತ್ತಿದ್ದೀರಲ್ವಾ? ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನಿಮಗೆ ರಾಜ್ಯವನ್ನು ಲೂಟಿ ಮಾಡದೆ ಸಮಾಧಾನ ಇಲ್ಲವೇ? ನಾಚಿಕೆಯಾಗುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.

- Advertisement -