ಬಾರ್ ಧ್ವಂಸ ಪ್ರಕರಣ | ಮಹಿಳೆಯರು ಸೇರಿ ಏಳು ಮಂದಿಯ ಬಂಧನ: ಕಾರ್ಯಾಚರಣೆ ವೇಳೆ ಪೊಲೀಸರ ಗೂಂಡಾಗಿರಿ !

Prasthutha|

ಚಿಕ್ಕಮಗಳೂರು: ಹೊಸದಾಗಿ ಮದ್ಯದಂಗಡಿ ತೆರೆದುದನ್ನು ವಿರೋಧಿಸಿ ಮಹಿಳೆಯರು ಅಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಪ್ರತಿಭಟಿಸಿದ್ದ ಜನರನ್ನು ಪೊಲೀಸರು ಬಂಧಿಸಿದ ಘಟನೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಇಂದು ಬೆಳಗ್ಗೆ ಗ್ರಾಮಕ್ಕಾಗಮಿಸಿದ ಪೊಲೀಸರು ಅಪ್ರಾಪ್ತ ಬಾಲಕ, ಮೂವರು ಮಹಿಳೆಯರು ಸೇರಿ ಏಳು ಜನರನ್ನು ಬಂಧಿಸಿದ್ದಾರೆ.

ಪೊಲೀಸರು ಗೂಂಡಾ ವರ್ತನೆ ತೋರಿದ್ದಾರೆ, ಬಾಗಿಲು, ಹೆಂಚು ಮುರಿದು ಮನೆಯೊಳಗೆ ನುಗ್ಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ವಿರೋಧದ ಮಧ್ಯೆಯೂ ಮದ್ಯದಂಗಡಿ ತೆರೆದ ಹಿನ್ನೆಲೆಯಲ್ಲಿ ಕೋಪಗೊಂಡ 50ಕ್ಕೂ ಹೆಚ್ಚು ಮಹಿಳೆಯರು ಮದ್ಯದಂಗಡಿಗೆ ನುಗ್ಗಿ, ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಬಾರ್ ತೆರೆಯದಂತೆ ಮುಸ್ಲಾಪೂರದ ಮಹಿಳೆಯರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು.

Join Whatsapp