JNU ನಲ್ಲಿ ABVP-AISA ಘರ್ಷಣೆ; ಹಲವರಿಗೆ ಗಾಯ

Prasthutha|

ಹೊಸದಿಲ್ಲಿ: ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ABVP-AISA ಘರ್ಷಣೆಯುಂಟಾಗಿದ್ದು, ಉಭಯ ತಂಡಗಳ ನಡುವಿನ ಘರ್ಷಣೆಯಲ್ಲಿ ಹಲವರು ಗಾಯಗೊಂಡು ಏಮ್ಸ್‌ಗೆ ದಾಖಲಾಗಿದ್ದಾರೆ. ಕ್ಯಾಂಪಸ್‌ನಲ್ಲಿ ವಿಚಾರ ಸಂಕಿರಣ ನಡೆಸುವುದಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

ಸ್ಟೂಡೆಂಟ್ ಯೂನಿಯನ್ ಹಾಲ್ ನಲ್ಲಿ ವಿಚಾರ ಸಂಕಿರಣ ನಡೆಸುವ ವಿಚಾರವಾಗಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಎರಡೂ ಕಡೆಯವರು ದೂರು ನೀಡಿದ್ದಾರೆ. ಈ ಹಿಂದೆಯೂ ಕ್ಯಾಂಪಸ್ನಲ್ಲಿ ABVP-AISA ಘರ್ಷಣೆ ನಡೆದಿತ್ತು ಎಂದು ತಿಳಿದುಬಂದಿದೆ.

2020 ರಲ್ಲಿ AISA ಕಾರ್ಯಕರ್ತನ ಮೇಲೆ ಎಬಿವಿಪಿ ಕಾರ್ಯಕರ್ತರು ಸೇರಿದಂತೆ 16 ಜನರು ತಡರಾತ್ರಿ ಹಾಸ್ಟೆಲ್ ಕೋಣೆಯಲ್ಲಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಆದರೆ, ಇದು ನಿರಾಧಾರ ಆರೊಪ ಎಂದು ABVP ಹೇಳಿಕೆ ನೀಡಿತ್ತು.

- Advertisement -

2018ರಲ್ಲೂ JNU ವಿದ್ಯಾರ್ಥಿ ಸಂಘದ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ABVP ಮತ್ತು AISA ಸದಸ್ಯರ ನಡುವೆ ಘರ್ಷಣೆ ನಡೆದಿತ್ತು.

Join Whatsapp