ಭಾರತದ ಹಿಂದೂಗಳು ದೇಶದ ಅಲ್ಪಸಂಖ್ಯಾತರೊಂದಿಗೆ ಸೌಹಾರ್ದತೆಯಿಂದ ಬಾಳುವಂತಾಗಲಿ: UAE ರಾಜಕುಮಾರಿ

Prasthutha|

ದುಬೈ: ಭಾರತದಲ್ಲಿರುವ ಹಿಂದೂಗಳು ದೇಶದ ಅಲ್ಪಸಂಖ್ಯಾತರೊಂದಿಗೆ ಶಾಂತಿ ಸೌಹಾರ್ದತೆಯಿಂದ ಬಾಳುವಂತಾಗಲಿ ಎಂದು UAE ರಾಜಕುಮಾರಿ ಹಿಂದ್ ಬಿಂತ್ ಫೈಝಲ್ ಅಲ್ ಖಾಸಿಮಿ ಆಶಾವಾದ ವ್ಯಕ್ತಪಡಿಸಿದ್ದಾರೆ.

- Advertisement -

ಹಿಂದೂ ದೇವರುಗಳಾದ ಶಿವ, ಪಾರ್ವತಿ, ಗಣಪತಿ ಮತ್ತು ಮುರುಗನ್ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಹಿಂದ್, “ಶಿವ, ಪಾರ್ವತಿ, ಗಣೇಶ ಮತ್ತು ಮುರುಗನ್ ಬಳಿ ಕಂಡುಬರುವ ಹಾವುಗಳು, ನವಿಲುಗಳು ಮತ್ತು ಸಿಂಹಗಳಂತಹ ಜೀವಿಗಳು ಪ್ರಕೃತಿಯಲ್ಲಿ ಪರಸ್ಪರ ಸಾಮರಸ್ಯದಿಂದ ಬದುಕುವುದಿಲ್ಲ ಆದರೆ ಶಿವನ ಕುಟುಂಬದಲ್ಲಿ ಈ ಜೀವಿಗಳು ಜೊತೆಯಾಗಿ ಸಂತೋಷದಿಂದ ಇರುತ್ತವೆ. ಇದೇ ರೀತಿ ಭಾರತದಲ್ಲಿರುವ ಹಿಂದೂಗಳೂ ಕೂಡ ದೇಶದ ಅಲ್ಪಸಂಖ್ಯಾತರೊಂದಿಗೆ ಶಾಂತಿಯಿಂದ ಬಾಳುವಂತಾಗಲಿ ಎಂದು ಹೇಳಿದ್ದಾರೆ.

ಈ ಹಿಂದೆ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಿಂದ್ ಟೀಕಿಸಿದ್ದರು

Join Whatsapp