ಉಳ್ಳಾಲ ಮಾಜಿ ಶಾಸಕರ ಮಗನ ಮನೆಮುಂದೆ ಬಜರಂಗದಳ ಕಾರ್ಯಕರ್ತರ ಪುಂಡಾಟಿಕೆ | ಹಲವರು ವಶಕ್ಕೆ

Prasthutha|

ಮಂಗಳೂರು : ಉಳ್ಳಾಲ ಮಾಜಿ ಶಾಸಕ ದಿವಂಗತ ಇದಿನಬ್ಬರ ಮಗ ಬಿ ಎಂ ಬಾಷಾ ರವರ ಮನೆಗೆ ವಿಎಚ್ ಪಿ , ಬಜರಂಗದಳ ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಮನೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಮನೆ ಗೇಟ್ ನ ಬಳಿಯೇ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.

- Advertisement -

ಇತ್ತೀಚೆಗಷ್ಟೆ ಉಳ್ಳಾಲದಲ್ಲಿ ಬಿ ಎಂ ಬಾಷಾ ಮನೆಗೆ ಎನ್.ಐ.ಎ ದಾಳಿ ನಡೆದಿತ್ತು. ಈ ಕುರಿತು ಉಳ್ಳಾಲದ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ದಿಢೀರನೆ ಇದಿನಬ್ಬ ಸೊಸೆಯ ಜೊತೆ ಮಾತಾನಾಡುವುದಕ್ಕೆ ಅವಕಾಶ ಕೇಳಿ ಮನೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ.



Join Whatsapp