ಅಸ್ಸಾಂ | ಕ್ರಿಸ್ಮಸ್ ನಲ್ಲಿ ಭಾಗವಹಿಸುವ ಹಿಂದೂಗಳಿಗೆ ಏಟು ಕೊಡುತ್ತೇವೆ : ಭಜರಂಗದಳ ಮುಖಂಡನ ಬೆದರಿಕೆ

Prasthutha|

ಸಿಲ್ಚಾರ್ : ಅಸ್ಸಾಂನಲ್ಲಿ ಹಿಂದೂಗಳು ಕ್ರಿಸ್ಮಸ್ ಹಬ್ಬಕ್ಕೆ ಚರ್ಚ್ ಗಳಿಗೆ ಭೇಟಿ ನೀಡಿದರೆ ಏಟು ನೀಡುತ್ತೇವೆ ಎಂದು ಭಜರಂಗ ದಳ ಘೋಷಿಸಿದೆ.

“ಕ್ರಿಸ್ಮಸ್ ದಿನ ಹಿಂದೂಗಳು ಚರ್ಚ್ ಗಳಿಗೆ ಭೇಟಿ ನೀಡಿದರೆ, ಅವರು ಭೀಕರ ಏಟುಗಳನ್ನು ತಿನ್ನಬೇಕಾಗುತ್ತದೆ” ಎಂದು ಕ್ಯಾಚಾರ್ ಜಿಲ್ಲಾ ಭಜರಂಗ ದಳ ಪ್ರಧಾನ ಕಾರ್ಯದರ್ಶಿ ಮಿಥುನಾಥ್ ಹೇಳಿದ್ದಾರೆ.

- Advertisement -

ಮಾಧ್ಯಮಗಳು ನಮ್ಮನ್ನು ಗೂಂಡಾ ಗ್ಯಾಂಗ್ ಎನ್ನುತ್ತವೆ. ಹೌದು, ನಮ್ಮ ಹಿಂದು ಹೆಣ್ಣು ಮಕ್ಕಳನ್ನು ಮುಟ್ಟಿದರೆ ಮತ್ತು ಕಿರುಕುಳ ನೀಡಿದರೆ, ನಾವು ಗೂಂಡಾಗಳಾಗುತ್ತೇವೆ ಮತ್ತು ಅದಕ್ಕೆ ನಮಗೆ ಹೆಮ್ಮೆಯಿದೆ ಎಂದು ನಾಥ್ ಹೇಳಿದ್ದಾರೆ.

ಡಿ.26ರ ಪತ್ರಿಕೆಗಳ ಹೆಡ್ ಲೈನ್ ಗಳು ಏನೆಂಬುದು ನಮಗೆ ಗೊತ್ತಿದೆ. ಭಜರಂಗದಳದ ಗೂಂಡಾಗಳು ಓರಿಯಂಟಲ್ ಸ್ಕೂಲ್ ನಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಎಲ್ಲಾ ಪತ್ರಿಕೆಗಳಲ್ಲಿ ಬಂದಿರುತ್ತದೆ. ಆದರೆ, ನಾವು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಅವರು ಶಿಲ್ಲಾಂಗ್ ನಲ್ಲಿ ದೇವಸ್ಥಾನದ ಗೇಟ್ ಗಳಿಗೆ ಬೀಗ ಹಾಕಿರುವಾಗ, ಕ್ರಿಸ್ಮಸ್ ವೇಳೆ ಹಿಂದುಗಳು ಅದರಲ್ಲಿ ಭಾಗವಹಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ನಾಥ್ ತಿಳಿಸಿದ್ದಾರೆ. .

ಶಿಲ್ಲಾಂಗ್ ನಲ್ಲಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರಕ್ಕೆ ಇತ್ತೀಚೆಗೆ ಬೀಗ ಹಾಕಿದ್ದ ಘಟನೆಗೆ ಸಂಬಂಧಿಸಿ ನಾಥ್ ಉಲ್ಲೇಖಿಸಿ ಮಾತನಾಡಿದ್ದಾರೆ. ಈ ಕೇಂದ್ರ ರಾಮಕೃಷ್ಣ ಮಿಶನ್ ಗೆ ಸೇರಿದ್ದು, ನಾಥ್ ರ ಹೇಳಿಕೆಗೆ ವಿರುದ್ಧ ಅಭಿಪ್ರಾಯವನ್ನು ಮಿಶನ್ ನ ಕಾರ್ಯದರ್ಶಿ ಮಹಾರಾಜ್ ವ್ಯಕ್ತಪಡಿಸಿದ್ದಾರೆ. ವಿಷಯ ಸಾಂಸ್ಕೃತಿಕ ಕೇಂದ್ರಕ್ಕೆ ಸಂಬಂಧ ಪಟ್ಟಿದ್ದು, ದೇವಸ್ಥಾನದಲ್ಲಿ ಯಾವುದೇ ಅಡ್ಡಿಯಿಲ್ಲ, ಎಲ್ಲಾ ಕಾರ್ಯಗಳು ಸರಿಯಾಗಿ ನಿರ್ವಹಿಸಲ್ಪಡುತ್ತಿವೆ ಎಂದು ನಾಥ್ ಹೇಳಿದ್ದಾರೆ.   

- Advertisement -