ಅಮೆರಿಕದಲ್ಲಿ ಅಂಚೆ ಕಚೇರಿಗೆ ಹತ ಸಿಖ್ ಪೊಲೀಸ್ ಅಧಿಕಾರಿ ಹೆಸರು

Prasthutha|

ವಾಷಿಂಗ್ಟನ್ : ಹ್ಯೂಸ್ಟನ್ ಅಂಚೆ ಕಚೇರಿಗೆ ಕರ್ತವ್ಯದಲ್ಲಿದ್ದಾಗ ಹತ್ಯೆಗೀಡಾದ ಸಿಖ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ ಅವರ ಹೆಸರಿಡುವ ಮಸೂದೆಗೆ ಅಮೆರಿಕದ ಸೆನೆಟ್ ಸರ್ವಾನುಮತದಿಂದ ಅಂಗೀಕಾರ ನೀಡಿದೆ.

- Advertisement -

ಹ್ಯೂಸ್ಟನ್ ನ 315 ಅಡಿಕ್ಸ್ ಹೊವೆಲ್ ರಸ್ತೆಯಲ್ಲಿರುವ ಅಂಚೆ ಕಚೇರಿಯನ್ನು ‘ಡೆಪ್ಯುಟಿ ಸಂದೀಪ್ ಸಿಂಗ್ ಧಲಿವಾಲ ಪೋಸ್ಟ್ ಆಫೀಸ್ ಕಟ್ಟಡ’ ದು ಮರುನಾಮಕರಣ ಮಾಡುವ ಮಸೂದೆಯನ್ನು ಸಂಸತ್ ನ ಕೇಳಮನೆಯಲ್ಲಿ ಅಂಗೀಕರಿಸಲಾಗಿದೆ.

2019 ಸೆ.27ರಂದು ಕರ್ತವ್ಯ ನಿರತರಾಗಿದ್ದಾಗ ಸಂದೀಪ್ ಸಿಂಗ್ ಹತ್ಯೆಗೀಡಾಗಿದ್ದರು. ಈ ಮಸೂದೆಗೆ ಕೇವಲ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಮಾತ್ರ ಬಾಕಿಯಿದೆ.   

Join Whatsapp