ಬಜ್ಪೆ: ಎಸ್ಸೆಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ NWF ನಿಂದ ಸನ್ಮಾನ

Prasthutha|

ಬಜ್ಪೆ: ಎಸ್ಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಬಜ್ಪೆ ವಲಯ ಸದಸ್ಯರ ಒಕ್ಕೂಟದಿಂದ ಸನ್ಮಾನಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ನಾಯಕಿ ಸಹಲಾ, ವಿದ್ಯಾರ್ಥಿಗಳು ದೇಶದ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನಿಟ್ಟು, ಸಮಾನತೆಯ, ಶಾಂತಿಯುತ ಮತ್ತು ಸಹೋದರತೆಯಿಂದ ಕೂಡಿದ ಸಮಾಜವನ್ನು ಕಟ್ಟುವ ಕನಸಿನೊಂದಿಗೆ ಶಿಕ್ಷಣ ಪಡೆಯಬೇಕಾಗಿದೆ ಎಂದರು.

ಸೈಂಟ್ ಜೋಸೆಫ್ ಶಾಲೆಯ ಪ್ರಾಂಶುಪಾಲರಾದ ಅಲ್ವಿನ್ ಅರುಣ್ ನೊರೋನ್ಹ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಉತ್ತೇಜನಕಾರಿ ಮಾತುಗಳನ್ನಾಡಿದರು.

- Advertisement -

ಈ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಇಂಜಿನಿಯರ್ (ಅಲ್ ಹುದಾ ಜುಮಾ ಮಸ್ಜಿದ್ ಕಮಿಟಿ ಸದಸ್ಯ), ಆಯಿಷ ಬಜ್ಪೆ, ರಾಫಿಯಾ ಮೊದಲಾದವರು ಉಪಸ್ಥಿತರಿದ್ದರು.

Join Whatsapp