ಗುಜರಾತ್ ನಲ್ಲಿ ನಾಪತ್ತೆಯಾದ 11 ಶಾಸಕರು: ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಕಂಟಕ

Prasthutha|

ಮುಂಬೈ: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದ ಶಿವಸೇನೆ ಮತ್ತು ಕಾಂಗ್ರೆಸ್ ಶಾಸಕರ ವಿಚಾರ ತಣ್ಣಗಾಗುವುದಕ್ಕೆ ಮೊದಲೇ ಶಿವಸೇನೆಗೆ ಸೇರಿದ ಮಂತ್ರಿ ಮತ್ತು ಕೆಲವು ಶಾಸಕರು ಗುಜರಾತಿಗೆ ತೆರಳಿ ಯಾರ ಕೈಗೂ ಸಿಗದೆ ಅಡಗಿ ಕುಳಿತಿದ್ದಾರೆ ಎಂದು ವರದಿಯಾಗಿದೆ.

- Advertisement -


ಮಂತ್ರಿ ಏಕನಾಥ ಶಿಂಧೆ 11 ಮಂದಿ ಶಾಸಕರೊಂದಿಗೆ ಗುಜರಾತಿನ ಸೂರತ್ ನಲ್ಲಿ ಬಿಜೆಪಿ ಆತಿಥ್ಯದಲ್ಲಿದ್ದು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಮಹಾರಾಷ್ಟ್ರ ವಿಕಾಸ ಅಘಾಡಿ ಸರಕಾರಕ್ಕೆ ಅಪಾಯ ತಂದೊಡ್ಡಿದೆ. ಶಿವಸೇನೆಯ ಹಿರಿಯ ಮಂತ್ರಿ ಏಕನಾಥ ಶಿಂಧೆ ಮುಂಬೈಯಿಂದ ಸೂರತ್ ಗೆ ತೆರಳಿದ್ದು ಮಾತ್ರ ಗೊತ್ತು ಅನಂತರ ಶಾಸಕರೊಡನೆ ಏನಾದರು ಎಂದು ತಿಳಿದು ಬರುತ್ತಿಲ್ಲ.


ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಶಿಂಧೆಯವರು 11 ಶಾಸಕರೊಡನೆ ಕಾಣೆಯಾಗಿದ್ದಾರೆ. ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿವಸೇನೆಯ 12 ಶಾಸಕರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇವರೇ ಆ ಡಜನ್ ಜನ ಎಂಬುದು ಈಗ ಸಾಬೀತಾದಂತಾಗಿದೆ. ಸೂರತ್ ಮೂಲಗಳು ಹೇಳುವಂತೆ ಇಲ್ಲಿನ ಲೆ ಮೆರಿಡಿಯನ್ ಹೋಟೆಲಿನಲ್ಲಿ ಮಹಾರಾಷ್ಟ್ರದ ಡಜನ್ ಶಾಸಕರು ಬಂದು ತಂಗಿದ್ದಾರೆ. ನಿನ್ನೆ ಸೋಮವಾರ ನಡುರಾತ್ರಿ ಇವರು ಈ ಹೋಟೆಲಿಗೆ ಬಂದು ಸೇರಿದ್ದಾರೆ. ಹೋಟೆಲಿನ ಸುತ್ತ ಭಾರೀ ಪೊಲೀಸ್ ಬಂದೋಬಸ್ತ್ ಇರುವುದು ಎದ್ದು ಕಾಣುತ್ತಿದೆ.

- Advertisement -


ಶಿಂಧೆ ತಂಡ ಅಡಗಿರುವುದರಿಂದ ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಮೈತ್ರಿಯ ಮಹಾರಾಷ್ಟ್ರ ವಿಕಾಸ ಅಘಾಡಿ ಸರಕಾರವು ಅಪಾಯದ ಅಂಚಿನಲ್ಲಿದೆ. ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಹುಮತಕ್ಕೆ ಬೇಕಾದುದು 145 ಮತಗಳು. ವಿಧಾನ ಪರಿಷತ್ ಚುನಾವಣೆಯಲ್ಲಿ ಅದು ಒಟ್ಟು 144 ಮತಗಳನ್ನು ಪಡೆದಿರುವುದು ಅದರ ಖರೀದಿ ಉತ್ಸಾಹವನ್ನು ಹೆಚ್ಚಿಸಿದೆ.
ಮುಖ್ಯಮಂತ್ರಿ ಠಾಕ್ರೆಯವರು ಈ ಬಂಡಾಯದ ಹಿನ್ನೆಲೆಯಲ್ಲಿ ಜೂನ್ 21ರ ಸಂಜೆ ಶಿವಸೇನೆ ಶಾಸಕಾಂಗ ಪಕ್ಷದ ತುರ್ತು ಸಭೆಯನ್ನು ಕರೆದಿದ್ದಾರೆ.


ಸೋಮವಾರ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಶಿವಸೇನೆಯವರಲ್ಲದೆ ಕಾಂಗ್ರೆಸ್ಸಿನ ಮೂವರು ಶಾಸಕರು ಕೂಡ ಬಿಜೆಪಿ ಪರ ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆ ಜವಾಬ್ದಾರಿ ಹೊರುವ ಮಾತುಕತೆಗಾಗಿ ಹಿರಿಯ ಶಾಸಕರು, ನಾಯಕರು ಮತ್ತು ಮಂತ್ರಿಗಳನ್ನು ದಿಲ್ಲಿಗೆ ಕರೆಸಿಕೊಳ್ಳಲಾಗಿದೆ. ಕಂದಾಯ ಮಂತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ಬಾಳಾಸಾಹೇಬ್ ತೋರಟ್ ಅದರ ಜವಾಬುದಾರಿ ಅಲ್ಲದೆ ಅದಕ್ಕಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು ಎಂದರು.
ಕಾಂಗ್ರೆಸ್ಸಿನ ಮೂವರು ಅಡ್ಡ ಮತದಾನ ಮಾಡಿದ್ದರಿಂದ ಆ ಪಕ್ಷದ ಆದ್ಯತೆಯ ಅಭ್ಯರ್ಥಿ, ದಲಿತ ನಾಯಕ ಚಂದ್ರಕಾಂತ ಹೊಂದೋರೆ ಸೋಲುಂಡಿದ್ದಾರೆ.

Join Whatsapp