ಪುತ್ತೂರು: ಲಾಡ್ಜ್ ದಾಳಿ ಪ್ರಕರಣ| ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

Prasthutha|

ಮಂಗಳೂರು: ಪುತ್ತೂರು ನಗರದ ಲಾಡ್ಜ್ ಗೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಜರಂಗ ದಳದ ಕಾರ್ಯಕರ್ತರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಲಾಡ್ಜ್ ಗೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರ ವಿರುದ್ಧ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

- Advertisement -


ಬೆಂಗಳೂರು ಮೂಲದ ಮಹಿಳೆಯೊಬ್ಬರು ಪುತ್ತೂರು ಪೊಲೀಸರ ವಶದಲ್ಲಿದ್ದ ಕಾರೊಂದನ್ನು ಬಿಡಿಸಿಕೊಳ್ಳಲು ಪುತ್ತೂರಿಗೆ ಬಂದಿದ್ದರು. ಈ ವೇಳೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದರು. ಪೊಲೀಸರ ವಶದಲ್ಲಿದ್ದ ತನ್ನ ಮಾಲೀಕತ್ವದ ಕೆಎ 05 ಎನ್.ಬಿ 7355 ನೇ ಕಾರನ್ನು ಬಿಡಿಸಿಕೊಳ್ಳಲು ಈ ಮಹಿಳೆ ತನ್ನ ಜೊತೆ ಕೆಲಸ ಮಾಡುತ್ತಿರುವ ಮಂಗಳೂರು ಉಳ್ಳಾಲ ನಿವಾಸಿ ಯು.ಕೆ ಮಹಮ್ಮದ್ ಅರಾಫತ್ ಮತ್ತು ಬೆಂಗಳೂರು ಕೊಟ್ಟಿಗೇರಿ ನಿವಾಸಿ ಶಿವ ಎಂಬವರ ಜೊತೆ ಬಾಡಿಗೆ ವಾಹನದಲ್ಲಿ 17.09.2021 ರಂದು ರಾತ್ರಿ ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದರು.

18.09.2021 ರಂದು ಬೆಳಿಗ್ಗೆ ಪುತ್ತೂರು ತಲುಪಿ ಪುತ್ತೂರು ಕಸಬಾ ಗ್ರಾಮದಲ್ಲಿರುವ ಆಶ್ಮಿ ಲಾಡ್ಜ್ ನಲ್ಲಿ ಮೂವರು ತಂಗಿದ್ದರು. 20.09.2021 ರಂದು 18.55 ಗಂಟೆಗೆ ಲಾಡ್ಜ್ ನಲ್ಲಿ ಮೂರು ಜನರು ಜೊತೆಯಲ್ಲಿ ಊಟ ಮಾಡಿಕೊಂಡಿದ್ದ ಸಮಯದಲ್ಲಿ ಲಾಡ್ಜ್ ನ ಹೊರಗಡೆ ಸುಮಾರು 10 ಜನರು ನಿಂತುಕೊಂಡಿದ್ದವರ ಪೈಕಿ 4-5 ಮಂದಿ ಮಹಿಳೆ ಬಳಿ ಬಂದು ಅವರ ಹೆಸರು ವಿಳಾಸ ಕೇಳಿ ಆ ಬಳಿಕ ಮಹಿಳೆಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಅವರ ಜೊತೆ ಇದ್ದ ಶಿವ ಎಂಬವರಿಗೆ ಕೈಯಿಂದ ಹೊಡೆದಿದ್ದಾರೆ. ಅಲ್ಲದೇ ಬಂದ ವ್ಯಕ್ತಿಗಳು ಮಹಿಳೆ ಹಾಗೂ ಜೊತೆಯಲ್ಲಿದ್ದವರ ಭಾವಚಿತ್ರವನ್ನು ತೆಗೆದು ಅವಮಾನ ಪಡಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು,ಪ್ರಕರಣ ದಾಖಲಿಸಿಕೊಂಡ ಪುತ್ತೂರು ಪೊಲೀಸರು ಇಬ್ಬರ ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

- Advertisement -

Join Whatsapp